ಕ್ರೀಡೆ

ಜೋಯಲ್ ಜೋಶ್

ಜೋಯಲ್ ಜೋಶ್
Published On :

ಸಾಧಿಸುವ ಛಲವಿದ್ದರೆ ಕ್ರಿಕೆಟ್ಟೊಂದೇ ಆಗಬೇಕೆಂದಿಲ್ಲ, ಕಬಡ್ಡಿಯಲ್ಲೂ ಕರಾಮತ್ತು ಪ್ರದರ್ಶಿಸಬಹುದು. ಇದನ್ನು ರಿಯಲ್ಲಾಗಿ ನಿರೂಪಿಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆಯ ಅವಿನಾಶ್ ಜೋಯಲ್.
ಅವಿನಾಶ್‌ಗೆ ಬಾಲ್ಯದಿಂದಲೇ ಗ್ರಾಮೀಣ ಕ್ರೀಡೆಗಳೆಂದರೆ ಅಚ್ಚುಮೆಚ್ಚು. ಹೀಗಾಗಿಯೇ ಅವರು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗಲೇ ರಾಜ್ಯಮಟ್ಟಕ್ಕೆ ಉತ್ತಮ ರೈಡರ್ ಆಗಿ ಆಯ್ಕೆಯಾಗಿದ್ದರು.

ಮೂಡುಬಿದಿರೆಯ ಆಳ್ವಾಸ್ ಪ್ರೌಢಶಾಲೆಯಲ್ಲೇ ಕಬಡ್ಡಿಗೆ ಒಳ್ಳೆಯ ವೇದಿಕೆ ಸಿಕ್ಕಿತು. ಪ್ರೋತ್ಸಾಹದೊಂದಿಗೆ ತರಬೇತಿಯೂ ಲಭ್ಯವಾಯಿತು. 9ನೇ ತರಗತಿಯಲ್ಲಿ ಜಿಲ್ಲಾಮಟ್ಟಕ್ಕೆ ಉತ್ತಮ ರೈಡರ್ ಆಗಿ ಆಯ್ಕೆಯಾದರು. ಇತ್ತೀಚಿಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪುಂಜಾಲಕಟ್ಟೆ ತಂಡವನ್ನು ಪ್ರತಿನಿಧಿಸಿದ್ದರು. ಅವಿನಾಶ್‌ಗೆ ಅನೇಕ ಪದಕಗಳು ಲಭಿಸಿವೆ. ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್ ಆಗಿ ಮಿಂಚಿದ್ದಾರೆ. 'ಪದವಿ ಪೂರೈಸಬೇಕು. ಕಬಡ್ಡಿಯಲ್ಲಿ ಇನ್ನಷ್ಟು ಸಾಧಿಸಬೇಕು. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕು. ಎನ್‌ಸಿಸಿ ಸೇರಿ ಯೋಧನಾಗಬೇಕು' ಎನ್ನುತ್ತಾರೆ ಅವಿನಾಶ್.
ಗ್ರಾಮೀಣ ಮಟ್ಟದಲ್ಲಿ ಅದೆಷ್ಟೋ ಅರಳುವ ಪ್ರತಿಭೆಗಳು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅದು ಸಿಕ್ಕರೆ ದೇಸಿ ಕ್ರೀಡೆಗೂ ಹೆಚ್ಚಿನ ಮಾನ್ಯತೆ ಸಿಗಬಹುದು. ಜನಪ್ರಿಯ ಕ್ರೀಡೆ ಕ್ರಿಕೆಟ್ ಹೊರತುಪಡಿಸಿದರೆ ಇನ್ಯಾವುದೇ ಕ್ರೀಡೆಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಗ್ರಾಮೀಣ ಆಟಗಾರರ ಮೇಲೂ ಸರ್ಕಾರ, ಕ್ರೀಡಾಸಂಸ್ಥೆಗಳು ಗಮನ ಹರಿಸಬೇಕು. ಅವಿನಾಶ್ ಅವರು ಬೆಳ್ತಂಗಡಿಯ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ. ಕಬಡ್ಡಿಯಲ್ಲಿ ಅವರು ತೋರಿದ ಸಾಧನೆಯಿಂದಾಗಿ ಕ್ರೀಡಾ ಮೀಸಲಾತಿ ಪಡೆದು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
-ನವೀನ್ ಭಟ್ ಇಳಂತಿಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.