ಜಮ್ಮು ಮತ್ತು ಕಾಶ್ಮೀರ ಮಣಿಸಿದ ಅಸ್ಸಾಂ
-ಡಿ.ಎನ್. ಮಹೇಂದ್ರ
ಮೈಸೂರು: ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಜಮ್ಮು ಕಾಶ್ಮೀರ ತಂಡವನ್ನು ಅಸ್ಸಾಂ ತಂಡವು 7-0 ಅಂತರದಿಂದ ಮಣಿಸಿದೆ.
ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್ನಲ್ಲಿ ಹಾಕಿ ಕರ್ನಾಟಕ ಆಯೋಜಿಸಿರುವ ಬಿ ವಿಭಾಗದ ಈ ಪಂದ್ಯಾವಳಿಯಲ್ಲಿ ಅಸ್ಸಾಂ ತಂಡದ ಮಕ್ಸಿಮ ಕ್ಷಲ್ಸೋ ಮತ್ತು ಫುಲವಾರಿ ಕಂಡುಲಾನ ಅವರು ಬಾರಿಸಿದ ತಲಾ ಮೂರು ಗೋಲುಗಳ ನೆರವಿನಿಂದ ಅಸ್ಸಾ ತಂಡ ಅಭೂತಪೂರ್ವ ಗೆಲವು ಸಾಧಿಸಿತು.
ಪಂದ್ಯದ ನಾಲ್ಕನೇ ನಿಮಿಷದಲ್ಲಿ ಮಕ್ಸಿಮ ಕ್ಷಲ್ಸೋ ಅವರು ಬಾರಿಸಿದ ಮೊದಲ ಗೋಲ್ ಮೂಲಕ ಅಸ್ಸಾಂ ತಂಡದ ಖಾತೆ ತೆರೆಯಲು ಕಾರಣರಾದರು. ಕ್ಷಲ್ಸೋ 4, 56 ಮತ್ತು 59ನೇ ನಿಮಿಷದಲ್ಲಿ ಗೋಲ್ ಬಾರಿಸಿದರು. ಫುಲ್ವಾರಿ ಕಂಡುಲಾನ ಅವರು 21, 64, 67ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು. ಸುರೂಪಿನ ತಿಗ್ಗ 69ನೇ ನಿಮಿಷದಲ್ಲಿ ಒಂದು ಗೋಲ್ ಬಾರಿಸಿದರು. ಅಸ್ಸಾಂ ತಂಡವು ಪಂದ್ಯದ ಮೊದಲಾರ್ಧದಲ್ಲಿ ಕೇವಲ 2 ಗೋಲ್ ಮಾತ್ರ ತನ್ನ ಖಾತೆಯಲ್ಲಿರಿಸಿಕೊಂಡಿತ್ತು. ಉಳಿದಾರ್ಧದಲ್ಲಿ ಐದು ಗೋಲ್ಗಳನ್ನು ತನ್ನದಾಗಿಸಿಕೊಂಡಿತು.
ಬಳಿಕ ನಡೆದ ಗುಜರಾತ್ ಮತ್ತು ಪುದುಚೇರಿ ನಡುವಿನ ಪಂದ್ಯಾವಳಿಯಲ್ಲಿ ಗುಜರಾತ್ ತಂಡ ಪುದುಚೇರಿ ತಂಡವನ್ನು 4-0 ಅಂತರದಿಂದ ಸೋಲಿಸಿತು. ತಂಡದ ನಾಯಕಿ ಪ್ರಿಯಾಂಕ ಸಿಂಗ್ (23ನಿ.), ಪರಮೇಶ್ವರಿ ಶಾನ್(43ನಿ.), ಜಿಲ್ಮಿಲ್ ಕಂಡೈ(62ನಿ.) ಮತ್ತು ಪ್ರಪ್ರಿ ಝಾ(69ನಿ.) ತಲಾ ಒಂದು ಗೋಲ್ ಬಾರಿಸಿದರು. ಪಂದ್ಯದ ಮೊದಲಾರ್ಧದಲ್ಲಿ ಗುಜರಾತ್ನ ಸಂಘಟಿತ ಹೋರಾಟವನ್ನು ಪಾಂಡಿಚೆರಿ ತಂಡ ಸಮರ್ಥವಾಗಿ ಎದುರಿಸಿತು. ಆ ವೇಳೆಗೆ 1 ಗೋಲ್ ಪಡೆದಿದ್ದ ಗುಜರಾತ್ ತಂಡ, ದ್ವಿತೀಯಾರ್ಧದಲ್ಲಿ ಮತ್ತೆ ಮೂರು ಗೋಲ್ ಪಡೆದು ಜಯ ಗಳಿಸಿತು. ದಿನದ ಕಡೆಯ ಪಂದ್ಯದಲ್ಲಿ ಒರಿಸ್ಸಾ ತಂಡವು, ಆಂಧ್ರ ತಂಡವನ್ನು 4-0 ಅಂತರದಿಂದ ಸೋಲಿಸಿತು. ಜಾಹ್ನವಿ ಪ್ರಧಾನ್ ಅವರು ಪಂದ್ಯದ 17 ಮತ್ತು 40ನೇ ನಿಮಿಷಯದಲ್ಲಿ ಎರಡು ಗೋಲ್ ಬಾರಿಸಿದರು. ನಂತರ ತಂಡದ ನಾಯಕಿ ರಿಂಕಿ ಮತ್ತು ರೋಜಿತ ಕುಜೂರ್ ತಲಾ ಒಂದೊಂದು ಗೋಲ್ ಬಾರಿಸಿದರು. ಪಂದ್ಯದ ಮೊದಲರ್ಧದಲ್ಲಿ 2 ಗೋಲ್ ಮತ್ತು ಉಳಿದರ್ಧದಲ್ಲಿ 2 ಗೋಲ್ ಬಾರಿಸಿದರು.
ಪಂದ್ಯ ಹದಿಮೂರು- ಜಮ್ಮು, ಕಾಶ್ಮೀರ ತಂಡವನ್ನು ಮಣಿಸಿದ ಅಸ್ಸಾಂ 7-0.
ಅಸ್ಸಾಂ ಗೋಲ್ ಸ್ಕೋರ್
ಮಾಕ್ಸಿಮ ಕ್ಷಲ್ಸೋ- 4, 56, 59ನಿ.
ಫುಲವಾರಿ ಕಂಡುಲಾನ- 21, 64, 67ನಿ.
ಸುರೂಪಿನ ತಿಗ್ಗ- 69ನಿ.
ಪಂದ್ಯ ಹದಿನಾಲ್ಕು- ಆಂಧ್ರ ತಂಡ ಸೋಲಿಸಿದ ಒರಿಸ್ಸಾ 4-0
ಒರಿಸ್ಸಾ ಗೋಲ್ ಸ್ಕೋರ್
ಜಾಹ್ನವಿ ಪ್ರಧಾನ್- 17, 40ನಿ.
ರಿಂಕಿ- 20ನಿ.
ರೋಜಿತ ಕುಜೂರ್- 37ನಿ.
ಪಂದ್ಯ ಹದಿನಾರು- ಪಾಂಡಿಚೇರಿ ಮಣಿಸಿದ ಗುಜರಾತ್ 4-0
ಗುಜರಾತ್ ಗೋಲ್ ಸ್ಕೋರ್
ಪ್ರಿಯಾಂಕ ಸಿಂಗ್- 23ನಿ.
ಪರಮೇಶ್ವರಿ ಶಾನ್- 43ನಿ.
ಜಿಲ್ಮಿಲ್ ಕಂಡೈ- 62ನಿ.
ಪ್ರಪ್ರಿ ಝಾ- 69ನಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

