ವಿಶ್ವ ಚಾಂಪಿಯನ್ ಚೆಸ್: ನಾಲ್ಕನೇ ಪಂದ್ಯ ಡ್ರಾ

ರಶಿಯಾದ ಸೋಚಿಯಲ್ಲಿ ನಡೆಯುತ್ತಿರುವ ಹಾಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಮತ್ತು...
ವಿಶ್ವನಾಥನ್ ಆನಂದ್ ಮತ್ತು ಮ್ಯಾಗ್ನಸ್ ಕಾರ್ಲ್ ಸನ್
ವಿಶ್ವನಾಥನ್ ಆನಂದ್ ಮತ್ತು ಮ್ಯಾಗ್ನಸ್ ಕಾರ್ಲ್ ಸನ್

ಸೋಚಿ: ರಶಿಯಾದ ಸೋಚಿಯಲ್ಲಿ ನಡೆಯುತ್ತಿರುವ ಹಾಲಿ ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಮತ್ತು ಭಾರತೀಯ ಚೆಸ್ ಪ್ರತಿಭೆ, ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ನಡುವಿನ ನಾಲ್ಕನೇ ಪಂದ್ಯ ಭುಧವಾರ ೪೭ ನಡೆಗಳ ನಂತರ ಡ್ರಾನಲ್ಲಿ ಮುಕ್ತಾಯವಾಗಿದೆ. ಇದರಿಂದ ಇಬ್ಬರೂ ಆಟಗಾರರು ೦.೫ ಅಂಕಗಳನ್ನು ಹಂಚಿಕೊಂಡಿದ್ದಾರೆ.

೧೨ ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯದ ಮುಕ್ತಾಯದ ನಂತರ ಈಗ ಇಬ್ಬರೂ ಆಟಗಾರರು ೨ ಅಂಕಗಳನ್ನು ಹೊಂದಿದ್ದಾರೆ.

"ಆನಂದ್ ಅವರು ಪಂದ್ಯವನ್ನು ಬಹಳ ವೇಗವಾಗಿ ಪ್ರಾರಂಭಿಸಿ, ಒಳ್ಳೆಯ ಹಂತಕ್ಕೆ ಬಂದು ನಿಂತಿದ್ದರು ಆದರೆ ನಂತರ ಅನವಶ್ಯಕವಾಗಿ ರಕ್ಷಣಾತ್ಮಕ ಆಟಕ್ಕೆ ಇಳಿದರು. ಆದರೆ ನಂತರ ಪಂದ್ಯವನ್ನು ಚೆನ್ನಾಗಿ ರಕ್ಷಣೆ ಮಾಡಿಕೊಂಡರು" ಎಂದು ವಿಶ್ವ ಚೆಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ೭ ನೆ ಸ್ಥಾನದಲ್ಲಿರುವ ಗ್ರಾಂಡ್ ಮಾಸ್ಟರ್ ಅನೀಶ್ ಗಿರಿ ತಿಳಿಸಿದ್ದಾರೆ.

ಗುರುವಾರ ಬಿಡುವಿನ ದಿನವಾಗಿದ್ದು, ಶುಕ್ರವಾರ ೫ನೆ ಸುತ್ತಿನ ಪಂದ್ಯ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com