ಸಂಕಷ್ಟದಲ್ಲಿ ಏಕದಿನ ಕ್ರಿಕೆಟ್: ರಾಹುಲ್ ದ್ರಾವಿಡ್

ಮುಂಬೈ: ಪ್ರಸ್ತುತ ಪರಿಸ್ಥಿತಿಯಲ್ಲಿ ಟೆಸ್ಟ್ ಕ್ರಿಕೆಟ್ ಗಿಂತ ಏಕದಿನ ಕ್ರಿಕೆಟ್ ಮಾದರಿ ಹೆಚ್ಚು ಸಂಕಷ್ಟದಲ್ಲಿದೆ ಎಂದು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರಾಹುಲ್ ದ್ರಾವಿಡ್ ಅವರು, ಟೆಸ್ಟ್ ಕ್ರಿಕೆಟ್ ಗಿಂತ ಹೆಚ್ಚಾಗಿ ಏಕದಿನ ಕ್ರಿಕೆಟ್ ಮಾದರಿ ಹೆಚ್ಚು ಸೊರಗುತ್ತಿದೆ. ನಾನು ಗಮನಿಸಿದಂತೆ ಏಕದಿನ ಕ್ರಿಕೆಟ್ ನ ಪ್ರಸ್ತುತತೆಯೇ ಇಲ್ಲವಾಗಿದ್ದು, ದ್ವಿಪಕ್ಷೀಯ ಸರಣಿ ಉದ್ದೇಶದಿಂದಷ್ಟೇ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
'ಸದ್ಯದ ಪರಿಸ್ಥಿತಿಯಲ್ಲಿ ಏಕದಿನ ಕ್ರಿಕೆಟ್ ಮಾದರಿ ಹೆಚ್ಚು ಸಂಕಷ್ಟದಲ್ಲಿದ್ದು, ಏಕದಿನ ಕ್ರಿಕೆಟ್ ಪ್ರಸ್ತುತತೆಯೇ ಇಲ್ಲವಾಗಿದೆ. ಸುಮ್ಮನೇ ದ್ವಿಪಕ್ಷೀಯ ಸರಣಿಗಳನ್ನು ಆಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದರ ಬದಲು ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಮಾದರಿಯ ಟೂರ್ನಮೆಂಟ್ ಗಳನ್ನು ಹೆಚ್ಚಿಸಬೇಕು. ದ್ವಿಪಕ್ಷೀಯ ಏಕದಿನ ಪಂದ್ಯಗಳ ಪ್ರಮಾಣ ಹೆಚ್ಚುವುದರಿಂದ ಆಟಗಾರರಿಗೆ ಕಷ್ಟವಾಗುತ್ತದೆಯೇ ಹೊರತು, ಕ್ರಿಕೆಟ್ ಗೆ ಯಾವುದೇ ರೀತಿಯ ಪ್ರಯೋಜನವಿಲ್ಲ' ಎಂದು 'ಜಾಮಿ' ಹೇಳಿದ್ದಾರೆ.
ಖ್ಯಾತ ಹಿರಿಯ ಮಾಜಿ ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್ ಅಪಾಯದಲ್ಲಿದೆ ಎಂದು ವಾದಿಸುತ್ತಿದ್ದರೆ, ಟೆಸ್ಟ್ ಕ್ರಿಕೆಟ್ ನಿಂದಾಗಿಯೇ ಹೆಚ್ಚು ಖ್ಯಾತಿಗಳಿಸಿದ ಭಾರತದ 'ದಿ-ವಾಲ್' ರಾಹುಲ್ ದ್ರಾವಿಡ್ ಅವರು ಮಾತ್ರ ಏಕದಿನ ಕ್ರಿಕೆಟ್ ಮಾದರಿಯ ಕುರಿತು ಕಳವಳ ವ್ಯಕ್ತಪಡಿಸಿರುವುದು ಅವರ ಕ್ರಿಕೆಟ್ ಪ್ರೀತಿಗೆ ಸಾಕ್ಷಿಯಾಗಿದೆ. ಕ್ರಿಕೆಟ್ ಅಭಿವೃದ್ಧಿಯ ದೃಷ್ಟಿಯಿಂದ ರಾಹುಲ್ ದ್ರಾವಿಡ್ ಅವರ ಸಲಹೆ ನಿಜಕ್ಕೂ ಸೂಕ್ತವಾಗಿದ್ದು, ಐಸಿಸಿ ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


