ಕ್ರೀಡೆ

ಧೋನಿ ಕಲೆಕ್ಷನ್ ಗೆ ಭಾರತದ ಸೂಪರ್ ಫಾಸ್ಟ್ ಬೈಕ್ ಸೇರ್ಪಡೆ

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅವರ ಬೈಕ್ ಕಲೆಕ್ಷನ್ ಗೆ ಮತ್ತೊಂದು ಸೂಪರ್ ಫಾಸ್ಟ್ ಬೈಕ್ ಸೇರ್ಪಡೆಗೊಂಡಿದೆ...

ಧೋನಿ ಕಲೆಕ್ಷನ್ ಗೆ ಭಾರತದ ಸೂಪರ್ ಫಾಸ್ಟ್ ಬೈಕ್ ಸೇರ್ಪಡೆ
ಧೋನಿಯ ಕವಾಸಕಿ ನಿಂಝಾ ಹೆಚ್-2 ಬೈಕ್
Published On :

ಜಾರ್ಖಂಡ್: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅವರ ಬೈಕ್ ಕಲೆಕ್ಷನ್ ಗೆ ಮತ್ತೊಂದು ಸೂಪರ್ ಫಾಸ್ಟ್ ಬೈಕ್ ಸೇರ್ಪಡೆಗೊಂಡಿದೆ.

ಎಂಎಸ್ ಡಿ ಬೈಕ್ ಪ್ರೀತಿ ಎಷ್ಟೆಂಬುದು ಎಲ್ಲರಿಗೂ ತಿಳಿದ ವಿಚಾರವೇ ಆದರೂ, ಪ್ರಸ್ತುತ ಐಪಿಎಸ್ ನಲ್ಲಿ ಬಿಸಿಯಾಗಿರುವ ಧೋನಿ ತಮ್ಮ ಬೈಕ್ ಕಲೆಕ್ಷನ್ ಗೆ ಮತ್ತೊಂದು ಬೈಕ್ ಅನ್ನು
ಸೇರ್ಪಡೆಗೊಳಿಸಿದ್ದಾರೆ. ಅದು ಅಂತಿಂಥ ಬೈಕಲ್ಲ. ಭಾರತದ ರಸ್ತೆಗಳಲ್ಲಿ ಅತ್ಯಂತ ವೇಗವಾಗಿ ಚೆಲಿಸಬಲ್ಲ ಕವಾಸಕಿ ನಿಂಝಾ ಹೆಚ್-2 ಬೈಕನ್ನು ಧೋನಿ ಖರೀದಿಸಿದ್ದಾರೆ.

ಈಗಾಗಲೇ ಕಾನ್ ಫಿಡರೇಟ್ ಹೆಲ್ಲ್ ಕ್ಯಾಟ್ X132, ಡುಗಾಟಿ 1098, ಕವಾಸಕಿ ನಿಂಝಾ ZX14R, ಹಾರ್ಲೆಡೇವಿಡ್ ಸನ್ ಫ್ಯಾಟ್ ಬಾಯ್, ಯಮಹಾ YZF600 ಸೇರಿದಂತೆ ಹಲವು ವಿದೇಶಿ ಬೈಕ್‌ಗಳನ್ನು ಹೊಂದಿರುವ ಧೋನಿ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಕವಾಸಕಿ ನಿಂಝಾ ಹೆಚ್-2 ಬೈಕ್ ಅನ್ನು ಈಗಾಗಲೇ ಮನೆಗೆ ತಂದಿದ್ದಾರೆ.

ಸದ್ಯದಲ್ಲಿಯೇ ಅದರ ಸವಾರಿ ಕೂಡ ಮಾಡಲಿದ್ದಾರೆ. ಇದು ರೇಸಿಂಗ್ ಬೈಕ್ ಮಾದರಿಯಾಗಿದ್ದು,  ಇದರ ಬೆಲೆ ಸರಿಸುಮಾರು ಒಂದು ಕೋಟಿ ಆಸುಪಾಸು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಭಾರತದಲ್ಲಿ ಅತಿ ವೇಗದ ಬೈಕ್ ಎಂಬ ಖ್ಯಾತಿಗೂ ಈ ಬೈಕ್ ಒಳಗಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.