ಶೀಘ್ರದಲ್ಲೇ ಜೂನಿಯರ್ ಮಲಿಕ್: ಶೊಯೇಬ್ ಮಲಿಕ್

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ನ ವಿಶ್ವ ರ್ಯಾಂಕಿಂಗ್‍ನಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸುತ್ತಿದ್ದಂತೆ...
ಸಾನಿಯಾ ಮಿರ್ಜಾ, ಶೊಯೇಬ್ ಮಲಿಕ್
ಸಾನಿಯಾ ಮಿರ್ಜಾ, ಶೊಯೇಬ್ ಮಲಿಕ್
Updated on

ಕರಾಚಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ನ ವಿಶ್ವ ರ್ಯಾಂಕಿಂಗ್‍ನಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸುತ್ತಿದ್ದಂತೆ ಸಹಸ್ರಾರು ಮಂದಿ ಸಾಮಾಜಿಕ ತಾಣಗಳ ಮೂಲಕ ಅಭಿನಂದನೆ ಸಲ್ಲಿಸಿದರು. ಅದೇ ರೀತಿ ಪತಿ ಶೊಯೇಬ್ ಮಲಿಕ್ ಕೂಡ ಅಭಿನಂದನೆ ಸಲ್ಲಿಸಿದ್ದರು.

ಸಾಮಾಜಿಕ ತಾಣದಲ್ಲಿ ಸಾನಿಯಾ ಮಿರ್ಜಾ ಕುರಿತಂತೆ ಕೇಳಲಾದ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿರುವ ಪತಿ ಶೊಯೇಬ್ ಮಲಿಕ್, ಶೀಘ್ರದಲ್ಲೇ ಜೂನಿಯರ್ ಮಲಿಕ್ ಬರುವುದಾಗಿ ತಿಳಿಸಿದ್ದಾರೆ. ಈ ವೇಳೆ ತಾವು ಸಾನಿಯಾ ಮಿರ್ಜಾ ಅವರ ನಂಬರ್ ಒನ್ ಅಭಿಮಾನಿಗಿರುವುದಾಗಿಯೂ ಹೇಳಿಕೊಂಡಿರುವ ಪಾಕಿಸ್ತಾನದ ಕ್ರಿಕೆಟರ್ ಶೊಯೇಬ್ ಮಲಿಕ್, ವೃತ್ತಿಪರ ಕ್ರಿಕೆಟರ್ ಆಗದೇ ಇದ್ದಿದ್ದರೆ ಸಾನಿಯಾ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಸಾನಿಯಾ ನಂಬರ್ ಒನ್ ಸ್ಥಾನಕ್ಕೇರಿದಾಗ ಆಕೆಯೊಂದಿಗೆ ಇರಲಿಲ್ಲ. ಹಾಗಾಗಿ ಫೋನ್ ಮೂಲಕ ಅಭಿನಂದನೆ ಸಲ್ಲಿಸಿದೆ. ಅಲ್ಲದೆ ಕುಣಿದು ಆನಂದಿಸಿದೆ ಎಂದು ತಿಳಿಸಿದ್ದಾರೆ.

ಜೂನಿಯರ್ ಮಲಿಕ್ ಯಾವಾಗ ಬರಬಹುದು ಎಂದು ಕೇಳಿದ ಪ್ರಶ್ನೆಗೆ ಶೊಯೇಬ್, ದೇವರ ಅನುಗ್ರಹದಿಂದ ಅತಿ ಶೀಘ್ರದಲ್ಲಿ ಎಂದು ಉತ್ತರಿಸಿದ್ದಾರೆ. ಸಾನಿಯಾ ಮಿರ್ಜಾ ಭಾರತವನ್ನು ಪ್ರತಿನಿಧಿಸಿದ್ದರೂ ಈ ಸಾಧನೆಯಿಂದ ಪಾಕಿಸ್ತಾನಕ್ಕೂ ಹೆಮ್ಮೆ ಇದೆ. ಈ ಎರಡೂ ದೇಶಗಳ ಟೆನಿಸ್ ಆಟಗಾರರು ಹಾಗೂ ಅಭಿಮಾನಿಗಳು ಈ ಸಾಧನೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ ಎಂದು ಮಲಿಕ್ ಅಭಿಪ್ರಾಯಪಟ್ಟಿದ್ದಾರೆ.

ಸಾನಿಯಾರನ್ನು ಮದುವೆಯಾಗುವ ಮುನ್ನವೂ ಟೆನಿಸ್ ಅನ್ನು ಇಷ್ಟಪಡುತ್ತಿದ್ದೆ, ಆಕೆಯ ಪ್ರತಿ ಪಂದ್ಯವನ್ನು ವೀಕ್ಷಿಸುತ್ತೇನೆ. ಆಕೆಯಿಂದ ದೂರ ಉಳಿಯುವುದರಿಂದ ಆಕೆಯ ಪಂದ್ಯವನ್ನು ತಪ್ಪದೆ ನೋಡುತ್ತೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com