ಆಟದ ವೇಳೆ ಗಾಯ: ಮತ್ತೋರ್ವ ಬೆಂಗಾಲಿ ಕ್ರಿಕೆಟಿಗ ಗಂಭೀರ

ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಅಂಕಿತ್ ಕೇಸರಿ ಸಾವನ್ನಪ್ಪಿದ್ದ ಬೆನ್ನಲ್ಲೇ ಮತ್ತೋರ್ವ ಬೆಂಗಾಲಿ...
ಬೆಂಗಾಲ್ ಕ್ರಿಕೆಟಿಗ ಗಂಭೀರ
ಬೆಂಗಾಲ್ ಕ್ರಿಕೆಟಿಗ ಗಂಭೀರ

ಕೋಲ್ಕತಾ: ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಅಂಕಿತ್ ಕೇಸರಿ ಸಾವನ್ನಪ್ಪಿದ್ದ ಬೆನ್ನಲ್ಲೇ ಮತ್ತೋರ್ವ ಬೆಂಗಾಲಿ ಕ್ರಿಕೆಟ್ ಆಟಗಾರ ರಾಹುಲ್ ಘೋಷ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೆಂಗಾಲ್ ಕ್ರಿಕೆಟ್ ಅಸೋಷಿಯೇಷನ್ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಘೋಷ್ ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿದ್ದಾಗ ಬಾಲ್ ರಾಹುಲ್ ಹಣೆಗೆ ಬಡಿದಿದೆ. ಈ ವೇಳೆ ಕೆಲಕ್ಷಣ ಪ್ರಜ್ಞೆ ಕಳೆದುಕೊಂಡಿದ್ದ ರಾಹುಲ್ ಬಳಿಕ ಮೈದಾನದಲ್ಲಿಯೇ ವಾಂತಿ ಮಾಡಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಫಿಸಿಯೋ ತುರ್ತು ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಪ್ರಸ್ತುತ ರಾಹುಲ್ ಘೋಷ್ ಸ್ಥಿತಿ ಸ್ಥಿರವಾಗಿದೆಯಾದರೂ, ಪ್ರಾಣಾಪಾಯದಿಂದ ಪಾರಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಕೋಲ್ಕತಾ ಪೊಲೀಸ್ ಅಥ್ಲೆಟಿಕ್ ಕ್ಲಬ್ ಪರವಾಗಿ ಆಡುತ್ತಿರುವ ರಾಹುಲ್ ಘೋಷ್, ಎದುರಾಳಿ ಆಟಗಾರ ಹೊಡೆದ ಬಾಲ್ ಅನ್ನು ಕ್ಯಾಚ್ ಆಗಿ ಪಡೆಯುವ ಪ್ರಯತ್ನದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಆಯೋಜಕರು ಹೇಳಿದ್ದಾರೆ. ಅಂಕಿತ್ ಕೇಸರಿಗೆ ಬಾಲ್ ತಗುಲಿದ್ದ ಅದೇ ಭಾಗದಲ್ಲಿ ರಾಹುಲ್ ಘೋಷ್ ಗೂ ಕೂಡ ಬಲವಾದ ಪೆಟ್ಟು ಬಿದ್ದಿದೆ. ಪ್ರಸ್ತುತ ನರತಜ್ಞರು ರಾಹುಲ್ ಘೋಷ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ರಾಹುಲ್ ಘೋಷ್ ಅವರ ತಂದೆ ಅಮಿತಾಬ್ ಘೋಷ್ ಆಸ್ಪತ್ರೆಗೆ ದೌಡಾಯಿಸಿದ್ದು, ವೈದ್ಯರು ಸಿಟಿ ಸ್ಕ್ಯಾನ್, ಎಕ್ಸ್ ರೇ ಮಾಡಿದ್ದಾರೆ. ತಲೆಯಲ್ಲಿ ರಕ್ತ ಹೆಪ್ಪುಗಟ್ಚಿದೆ ಎಂದು ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com