ಫೈನಲ್‍ಗೆ ಸೆರೆನಾ

ವಿಶ್ವದ ನಂಬರ್‍ಒನ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸಿನ್ಸಿನಾಟಿ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತನ್ನು ಪ್ರವೇಶಿಸಿದ್ದಾರೆ...
ಸೆರೆನಾ ವಿಲಿಯಮ್ಸ್ (ಸಂಗ್ರಹ ಚಿತ್ರ)
ಸೆರೆನಾ ವಿಲಿಯಮ್ಸ್ (ಸಂಗ್ರಹ ಚಿತ್ರ)

ಸಿನ್ಸಿನಾಟಿ: ವಿಶ್ವದ ನಂಬರ್‍ಒನ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸಿನ್ಸಿನಾಟಿ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತನ್ನು ಪ್ರವೇಶಿಸಿದ್ದಾರೆ.

ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ಸುತ್ತಿನ ಸೆಮಿಫೈನಲ್ ಪಂದ್ಯದಲ್ಲಿ ಅವರು, ಟೂರ್ನಿಯ 14ನೇ ಶ್ರೇಯಾಂಕಿತೆ ಉಕ್ರೇನ್‍ನ ಎಲಿನಾ ಸ್ವಿಟೋಲಿನಾ ಅವರನ್ನು 64, 63 ನೇರಸೆಟ್ ಗಳಲ್ಲಿ ಪರಾಭವಗೊಳಿಸಿದರು. ಫೈನಲ್‍ನಲ್ಲಿ ಅವರು ರೊಮೇನಿಯಾದ ಸಿಮೊನಾ ಹ್ಯಾಲೆಪ್‍ರನ್ನು ಎದುರಿಸಲಿದ್ದಾರೆ. ಭಾನುವಾರವೇ ನಡೆದಿದ್ದ ಮಹಿಳೆಯ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಹ್ಯಾಲೆಪ್, ಸರ್ಬಿಯಾದ ಜೆಲೆನಾ ಜಾಂಕೋವಿಚ್ ಅವರನ್ನು 61, 62 ನೇರ ಸೆಟ್‍ಗಳಿಂದ ಸೋಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com