ಫಿಫಾ ರ್ಯಾಂಕಿಂಗ್ ಭಾರತ ಜಿಗಿತ

ವಿಶ್ವ ಫುಟ್ಬಾಲ್ ರ್ಯಾಂಕಿಂಗ್ ನಲ್ಲಿ ಕುಸಿತ ಕಂಡಿದ್ದ ಭಾರತ ತಂಡ, ಗುರುವಾರ ಬಿಡುಗಡೆಯಾದ ನೂತನ ಪಟ್ಟಿಯಲ್ಲಿ ಜಿಗಿತ ಕಂಡಿದೆ...
ಭಾರತ ಫುಟ್ ಬಾಲ್ ತಂಡ (ಸಂಗ್ರಹ ಚಿತ್ರ)
ಭಾರತ ಫುಟ್ ಬಾಲ್ ತಂಡ (ಸಂಗ್ರಹ ಚಿತ್ರ)

ಜ್ಯೂರಿಚ್: ವಿಶ್ವ ಫುಟ್ಬಾಲ್ ರ್ಯಾಂಕಿಂಗ್  ನಲ್ಲಿ ಕುಸಿತ ಕಂಡಿದ್ದ ಭಾರತ ತಂಡ, ಗುರುವಾರ ಬಿಡುಗಡೆಯಾದ ನೂತನ ಪಟ್ಟಿಯಲ್ಲಿ ಜಿಗಿತ ಕಂಡಿದೆ.

ಈ ಮುನ್ನ 172ನೇ ಸ್ಥಾನದಲ್ಲಿದ್ದ ಭಾರತ ತಂಡ, ಈಗ ಬಿಡುಗಡೆ ಯಾಗಿರುವ ಪಟ್ಟಿಯಲ್ಲಿ 6 ಸ್ಥಾನ ಏರಿಕೆ ಕಂಡಿದ್ದು, ಪ್ರಸಕ್ತ 166ನೇ ಶ್ರೇಯಾಂಕದಲ್ಲಿದೆ. ಕಳೆದ ತಿಂಗಳುನ.12ರಂದು  ಬೆಂಗಳೂರಿನಲ್ಲಿ ಗುವಾಮ್ ವಿರುದ್ಧದ ವಿಶ್ವಕಪ್‍ನ 2ನೇ ಹಂತದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ 1-0 ಅಂತರದಲ್ಲಿ ಜಯ ಸಾಧಿಸಿತ್ತು. ಭಾರತ ತಂಡದ ಈ ಜಯ ತಂಡ ರ್ಯಾಂಕಿಂಗ್ ನಲ್ಲಿ ಬಡ್ತಿ ಕಾಣಲು ನೆರವಾಗಿದೆ. ಇನ್ನು ಕಳೆದ ತಿಂಗಳು ಮೊದಲ ಬಾರಿಗೆ ಅಗ್ರಸ್ಥಾನ ಪಡೆದ ಬೆಲ್ಜಿಯಂ ಅದೇ ಸ್ಥಾನದಲ್ಲಿ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com