

ನವದೆಹಲಿ: ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಇದೀಗ ಗಾಲ್ಫ್ಗೂ ಕಾಲಿರಿಸಲು ಮುಂದಾಗಿದ್ದಾರೆ.
ಇದೇ 5ರಿಂದ ಅಮೆರಿಕದ ಫೋನಿಷಿಯನ್ ಗಾಲ್ಫ್ ಕ್ಲಬ್‍ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಎಕ್ಸಿಕ್ಯೂಟಿವ್ ಗಾಲ್ಫ್ ಇನ್ವಿಟೇಷನಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಭಾರತ ಹಾಗೂ ಅಮೆರಿಕ ಯೋಧರನ್ನು ಬೆಂಬಲಿಸುವ ಉದ್ದೇಶದೊಂದಿಗೆ ಧೋನಿ ತಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.