ನವದೆಹಲಿ: ಶನಿವಾರ ದಿನದಾಟದ ಭೋಜನ ವಿರಾಮಕ್ಕೂ ಮುನ್ನ, ರಾಜ್ಯದ ಕೆ.ಎಲ್. ರಾಹುಲ್ ಹಾಗೂ ಗುರುಕೀರತ್ ಸಿಂಗ್ ಮೇಲೆ ಆರಂಭಿಕ ಶಿಖರ್ ಧವನ್ ತಮ್ಮ ಹುಟ್ಟುಹಬ್ಬದಂದೇ ಹರಿಹಾಯ್ದ ಪ್ರಸಂಗ ನಡೆದಿದೆ. 23ನೇ ಓವರ್‍ನಲ್ಲಿ ಇಮ್ರಾನ್ ತಾಹಿರ್ ಅವರ ಬೌಲಿಂಗ್ ಎದುರಿಸುವ ವೇಳೆ ಮುಂಗೈಗೆ ಚೆಂಡು ಬಡಿಸಿಕೊಂಡ ಶಿಖರ್ ಧವನ್, ಭಾರತ ತಂಡದ ಡ್ರೆಸಿಂಗ್ ರೂಂ ಕಡೆ ಸಂಜ್ಞೆಯನ್ನು ಮಮಾಡಿ ಮುಂಗೈ ಗಾರ್ಡ್ ತರುವಂತೆ ಕೋರಿದರು. ಆದರೆ, ಕೆ.ಎಲ್.ರಾಹುಲ್ ಹಾಗೂ ಗುರುಕೀರತ್ ಸಿಂಗ್, ಶಿಖರ್‍ಗೆ ದಣಿವಾಗಿದೆ ಎಂದೆಣಿಸಿ, ನೀರಿನ ಬಾಟಲಿ, ಹಣ್ಣುಗಳನ್ನು ತೆಗೆದುಕೊಂಡು ಔಟ್ ಫೀಲ್ಡ್ ನತ್ತ ಧಾವಿಸಿದಾಗ ತಕ್ಷಣವೇ ರಾಹುಲ್, ಸಿಂಗ್‍ರನ್ನು ಧವನ್ ನಿಂದಿಸಿದರೆನ್ನಲಾಗಿದೆ.