

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ ಹಾಗೂ ಸ್ವಹಿತಾಸಕ್ತಿ ಸಂಘರ್ಷ ಈ ಎಲ್ಲ ಅಂಶಗಳಿಂದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು 2 ವರ್ಷ ವಜಾಗೊಳಿಸಿದ ಹಿನ್ನೆಲೆಯಲ್ಲಿ ಆ ತಂಡಗಳ ಜಾಗಕ್ಕೆ ಹೊಸ ತಂಡಗಳ ಸೇರ್ಪಡೆಗೆ ನಡೆಯುತ್ತಿರುವ ಬಿಡ್‍ನಲ್ಲಿ 21 ಕಂಪನಿಗಳು ಭಾಗವಹಿಸಿವೆ.
ಆ ಪೈಕಿ ಸ್ಟಾರ್ ಇಂಡಿಯಾ ಹಾಗೂ ಚೆಟ್ಟಿನಾಡ ಸಿಮೆಂಟ್ಸ್ ಸಹ ಪ್ರಮುಖ ಬಿಡ್ಡರ್ ಗಳಾಗಿ ಹೊರಹೊಮ್ಮಿವೆ. ಇದ ರೊಂದಿಗೆ ಸೈಕಲ್ ಬ್ರಾಂಡ್ ಅಗರ್‍ಬತ್ತಿ ಸಹ ರೇಸ್‍ನಲ್ಲಿವೆ. ``21 ಕಾರ್ಪೊರೇಟ್ ಮತ್ತು ಉದ್ದಿಮೆ ಕಂಪನಿಗಳು ಬಿಡ್ ದಾಖಲೆಗಳನ್ನು ಖರೀದಿಸಿವೆ. ಅಂದಮಾತ್ರಕ್ಕೆ ಎರೂ ಬಿಡ್ ಮಾಡಲೇಬೇಕು ಎಂಬ ಅಗತ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.