ಕ್ರೀಡೆ

ಬಾಂಗ್ಲಾ ಕ್ರಿಕೆಟಿಗ ಶಹಾದತ್ ನಿರಾಳ

ತನ್ನ ಮನೆಯಲ್ಲಿ ಕೆಲಸಕ್ಕಿದ್ದ 11 ವರ್ಷದ ಬಾಲಕಿಯ ಮೇಲೆ ಪತ್ನಿಯೊಂದಿಗೆ ಸೇರಿ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಂಗ್ಲಾ ಕ್ರಿಕೆಟಿಗ...

ಬಾಂಗ್ಲಾ ಕ್ರಿಕೆಟಿಗ ಶಹಾದತ್ ನಿರಾಳ
ಶಹಾದತ್ ಹುಸೇನ್
Published On :
ಢಾಕಾ: ತನ್ನ ಮನೆಯಲ್ಲಿ ಕೆಲಸಕ್ಕಿದ್ದ 11 ವರ್ಷದ ಬಾಲಕಿಯ ಮೇಲೆ ಪತ್ನಿಯೊಂದಿಗೆ ಸೇರಿ ದೈಹಿಕವಾ ಗಿ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಂಗ್ಲಾ ಕ್ರಿಕೆಟಿಗ ಶಹಾದತ್ ಹುಸೇನ್ ಗೆ ಇಲ್ಲಿನ ಉಚ್ಚ ನ್ಯಾಯಾಲಯ ಜಾಮೀನು ನೀಡಿದೆ. 
ಮಾರ್ಚ್ 31, 2016ರವರೆಗೆ ಶಹಾದತ್‍ಗೆ ಕೋರ್ಟ್ ಜಾಮೀನು ನೀಡಿತಲ್ಲದೆ, ವೇಗಿಗೆ ಇಲ್ಲೀವರೆಗೆ ಜಾಮೀನು ನೀಡಲು ಏಕೆ ನಿರಾಕರಿಸಲಾಯಿತು ಎಂದು ಕೇಳಿದಾಗ ಮೂರು ವಾರಗಳಲ್ಲಿ  ಈ ಕುರಿತು ವರದಿ ಸಲ್ಲಿಸುವುದಾಗಿ ಸರ್ಕಾರ ತಿಳಿಸಿತು. ಮನೆಗೆಲಸದ ಬಾಲಕಿಯನ್ನು ಹಿಂಸಿಸಿದ್ದರಿಂದ ಢಾಕಾ ಮೆಟ್ರೊ ಪಾಲಿಟನ್ ಸೆಷನ್ಸ್ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದರು. ಡಿ.1ರಂದು ಶಹಾದತ್ ಪತ್ನಿಗೂ ಮುಂದಿನ ಜನವರಿ 17ರವರೆಗೆ ಕೋರ್ಟ್ ಜಾಮೀನು ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.