ಧರ್ಮಶಾಲಾಕ್ಕೆ ಉತ್ಕೃಷ್ಟ ಕೇಂದ್ರ

ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‍ಪಿಸಿಎ)ಯ ಶೋ ಪೀಸ್ ಎಂದೇ ಖ್ಯಾತವಾಗಿರುವ ಧರ್ಮಶಾಲಾ ಕ್ರೀಡಾಂಗಣದಲ್ಲಿ ತನ್ನ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸುವುದಾಗಿ ಏಷ್ಯನ್...
ಧರ್ಮಶಾಲಾ ಕ್ರಿಕೆಟ್ ಕ್ರೀಡಾಂಗಣ (ಸಂಗ್ರಹ ಚಿತ್ರ)
ಧರ್ಮಶಾಲಾ ಕ್ರಿಕೆಟ್ ಕ್ರೀಡಾಂಗಣ (ಸಂಗ್ರಹ ಚಿತ್ರ)

ಶಿಮ್ಲಾ: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‍ಪಿಸಿಎ)ಯ ಶೋ ಪೀಸ್ ಎಂದೇ ಖ್ಯಾತವಾಗಿರುವ ಧರ್ಮಶಾಲಾ ಕ್ರೀಡಾಂಗಣದಲ್ಲಿ ತನ್ನ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸುವುದಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಘೋಷಿಸಿದೆ.

ಅಲ್ಲದೆ, ಭಾರತದ ಮೌಲ್ಯಯುತ ಕ್ರೀಡಾಂಗಣವೆಂಬ ಮೆಚ್ಚುಗೆಯನ್ನೂ ಅದು ಸೂಚಿಸಿದೆ. ಉತ್ಕೃಷ್ಟ ಕೇಂದ್ರ ಮಂಜೂರಾದ ಹಿನ್ನೆಲೆಯಲ್ಲಿ, ಕ್ರೀಡಾಂಗಣಕ್ಕೆ ಒಳಾಂಗಣ ಹಾಗೂ ಹೊರಾಂಗಣ  ತರಬೇತಿ ಕೇಂದ್ರಗಳು ಲಭ್ಯವಾಗಲಿವೆ. ತರಬೇತುದಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ನೂತನ ತರಬೇತಿ ಉಪಕರಣಗಳು ಸಿಗಲಿವೆ. ಏಷ್ಯಾ ಉಪಖಂಡದಲ್ಲಿ ಧರ್ಮಶಾಲಾ ಉತ್ಕೃಷ್ಟ ಕೇಂದ್ರ ಒಂದು ಸಮರ್ಥ ತರಬೇತಿ ಕೇಂದ್ರವಾಗಿ ಬೆಳೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com