

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರು ಮತ್ತು ಅಭಿಮಾನಿಗಳ ನಡುವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ನಿಯಂತ್ರಣ ಕ್ರಿಕೆಟ್ ಮಂಡಳಿ ಫೇಸ್‍ಬುಕ್‍ಗೆ ಕಾಲಿಟ್ಟಿದೆ.
`ಇಂಡಿಯನ್ ಕ್ರಿಕೆಟ್ ಟೀಮ್' ಎಂಬ ಫೇಸ್‍ಬುಕ್ ಪೇಜ್ ಅನ್ನು ಆರಂಭಿಸಿರುವ ಬಿಸಿಸಿಐ, ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಜತೆ ಸಂಪರ್ಕ ಸಾಧಿಸಲು ವೇದಿಕೆ ಕಲ್ಪಿಸಿದೆ. ಆಟಗಾರರೊಂದಿಗೆ ಚಾಟ್ ಮಾಡುವುದರ ಜತೆಗೆ, ಟೀಂ ಇಂಡಿಯಾ ಆಟಗಾರರ ತಮಾಷೆ ವಿಡಿಯೊಗಳು, ಸಂದರ್ಶನಗಳು ಮತ್ತು ಇತರೆ ಕಾರ್ಯಕ್ರಮಗಳನ್ನು ಈ ಪೇಜ್ ಅಭಿಮಾನಿಗಳಿಗೆ ನೀಡಲಿದೆ. ಈ ಪೇಜ್‍ಗೆ ಈವರೆಗೂ 2.3 ಕೋಟಿಗೂ ಹೆಚ್ಚು ಲೈಕ್‍ಗಳು ಬಂದಿವೆ.