ಫುಟ್ಬಾಲ್: ಕರ್ನಾಟಕ ರನ್ನರ್ ಅಪ್

ಅತೀವ ಕೂತೂಹಲದಿಂದ ಕೂಡಿದ್ದ ಪಂದ್ಯದಲ್ಲಿ ಪೆನಾಲ್ಟಿ ಸುತ್ತಿನಲ್ಲಿ ಎಡವಿದ ಆತಿಥೇಯ ಕರ್ನಾಟಕ ತಂಡ 29ನೇ ಅಖಿಲ ಭಾರತ ಪೋಸ್ಟಲ್ ಫುಟ್ಬಾಲ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ..
ಪೋಸ್ಟಲ್ ಫುಟ್ ಬಾಲ್ (ಸಂಗ್ರಹ ಚಿತ್ರ)
ಪೋಸ್ಟಲ್ ಫುಟ್ ಬಾಲ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಅತೀವ ಕೂತೂಹಲದಿಂದ ಕೂಡಿದ್ದ ಪಂದ್ಯದಲ್ಲಿ ಪೆನಾಲ್ಟಿ ಸುತ್ತಿನಲ್ಲಿ ಎಡವಿದ ಆತಿಥೇಯ ಕರ್ನಾಟಕ ತಂಡ 29ನೇ ಅಖಿಲ ಭಾರತ ಪೋಸ್ಟಲ್ ಫುಟ್ಬಾಲ್ ಚಾಂಪಿಯನ್‍ಶಿಪ್  ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಶುಕ್ರವಾರ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕೇರಳ ತಂಡ ಪೆನಾಲ್ಟಿ ಸುತ್ತಿನಲ್ಲಿ 3-1 ಗೋಲುಗಳ ಅಂತರದಲ್ಲಿ ಕರ್ನಾಟಕ ತಂಡವನ್ನು  ಮಣಿಸಿತು. ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಯಾವುದೇ ಗೋಲು ದಾಖಲಿಸದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ನಿರ್ಧರಿಸಲು ಪೆನಾಲ್ಟಿ ಮೊರೆ ಹೋಗಲಾಯಿತು. ಈ  ನಿರ್ಣಾಯಕ ಘಟ್ಟದಲ್ಲಿ ಕೇರಳ ತಂಡದ ಪರ ಪಿ.ಎ. ಸನೇಶ್, ಟಿ.ಸಂದೀಪ್ ಮತ್ತು ವಿ.ಎ. ವಾಸು ಗೋಲು ಬಾರಿಸಿದರೆ, ಕರ್ನಾಟಕ ತಂಡದ ಪರ ಅರುಣ್ ಪಾಂಡೆ ಏಕೈಕ ಗೋಲು  ದಾಖಲಿಸಿದರು.

ಇದಕ್ಕೂ ಮುನ್ನ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಒಡಿಶಾ ತಂಡ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮಣಿಸಿತು. ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2-2ರ  ಸಮಬಲ ಸಾಧಿಸಿದವು. ನಂತರ ಪೆನಾಲ್ಟಿ ಸುತ್ತಿನಲ್ಲಿ ಒಡಿಶಾ 3 ಗೋಲು ದಾಖಲಿಸಿದರೆ, ಜಮ್ಮು ಮತ್ತು ಕಾಶ್ಮೀರ 1 ಗೋಲು ದಾಖಲಿಸಿ ನಾಲ್ಕನೇ ಸ್ಥಾನ ಪಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com