

ಮೆಲ್ಬರ್ನ್: ಆರಂಭಿಕ ಊಸ್ಮನ್ ಖವಾಜಾ (144) ಮತ್ತು ಜೊ ಬರ್ನ್ಸ್ (128) ಅವರ ಆಕರ್ಷಕ ಶತಕದ ನೆರವಿನಿಂದ ಆತಿಥಏಯ ಆಸ್ಟ್ರೇಲಿಯಾ, ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಹಿಡಿತ ಸಾಧಿಸಿದೆ. ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ನಂತರ ಬ್ಯಾಟಿಂಗ್ ಆರಂಭಿಸಿದ ಕಾಂಗರೂ ಪಡೆ ದಿನದಾಟ ಮುಗಿಯುವ ಹೊತ್ತಿಗೆ 90 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 345 ರನ್‍ಗಳ ಗೌರವ ಮೊತ್ತ ಸಂಪಾದಿಸಿದೆ. ಆ ಮೂಲಕ ಟೆಸ್ಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‍ಮನ್‍ಗಳು 1000 ಶತಕ ದಾಖಲಿಸಿದಂತಾಗಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 90 ಓವರ್‍ಗಳಲ್ಲಿ 3 ವಿಕೆಟ್‍ಗೆ 345 (ಜೋ ಬರ್ನ್ಸ್ 128, ಖವಾಜಾ 144; ಜೆರೋಮ್ ಟೇಲರ್ 83ಕ್ಕೆ 2, ಬ್ರಾತ್‍ವೈಟ್ 31ಕ್ಕೆ 1).