ಮತ್ತೆ ಐಪಿಎಲ್‍ಗೆ ಗ್ಯಾರಿ ಕಸ್ರ್ಟನ್?

ಭಾರತ ಕ್ರಿಕೆಟ್ ತಂಡ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್‍ನ ತರಬೇತುದಾರರಾಗಿದ್ದ, ದಕ್ಷಿಣ ಆಫ್ರಿಕಾ ಮೂಲದ ಗ್ಯಾರಿ ಕಸ್ರ್ಟನ್ ಪುನಃ ಐಪಿಎಲ್ ಗೆ ಕಾಲಿಡುವ ಸಾಧ್ಯತೆಗಳಿವೆ...
ಗ್ಯಾರಿ ಕಸ್ರ್ಟನ್
ಗ್ಯಾರಿ ಕಸ್ರ್ಟನ್

ನವದೆಹಲಿ: ಭಾರತ ಕ್ರಿಕೆಟ್ ತಂಡ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್‍ನ ತರಬೇತುದಾರರಾಗಿದ್ದ, ದಕ್ಷಿಣ ಆಫ್ರಿಕಾ ಮೂಲದ ಗ್ಯಾರಿ ಕಸ್ರ್ಟನ್ ಪುನಃ ಐಪಿಎಲ್ ಗೆ ಕಾಲಿಡುವ ಸಾಧ್ಯತೆಗಳಿವೆ. ನೂತನ ಐಪಿಎಲ್ ತಂಡವಾದ ರಾಜ್ ಕೋಟ್‍ಗೆ ಕೋಚ್ ಆಗುವ ಸಂಭವವಿದ್ದು ಈ ಬಗ್ಗೆ ಮಾತುಕತೆಗಳು ಸಾಗಿವೆ.

ಡೆಲ್ಲಿ ಡೇರ್ಡೆವಿಲ್ಸ್ ತಂಡದ ಕೋಚ್ ಸ್ಥಾನದಿಂದ ಇದೇ ತಿಂಗಳು ಅವರನ್ನು ತೆಗೆದುಹಾಕಲಾಗಿತ್ತು. ಡಿ. 7ರಂದು ಈ ಬಗ್ಗೆ ಡೆಲ್ಲಿ ಫ್ರಾಂಚೈಸಿ ಅಧಿಕೃತವಾಗಿ ಪ್ರಕಟಿಸಿತ್ತು. ಅತ್ತ, ಐಪಿಎಲ್‍ನ ಮತ್ತೊಂದು ನೂತನ ಫ್ರಾಂಚೈಸಿಯಾದ ಪುಣೆ, ನ್ಯೂಜಿಲೆಂಡ್‍ನ ಮಾಜಿ ಕ್ರಿಕೆಟಿಗ ಸ್ಟೀಫನ್ ಫ್ಲೆಮಿಂಗ್ ಅವರನ್ನು ತರಬೇತುದಾರರನ್ನಾಗಿ ನೇಮಿಸಲು ಪ್ರಯತ್ನ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com