

ಅಡಿಲೇಡ್: ಆಸ್ಟ್ರೇಲಿಯಾದಲ್ಲಿ ನಡೆುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಭಾರಿಸಿದ್ದಾರೆ.
ಅಡಿಲೇಡ್ ನಲ್ಲಿ ಇಂದು ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿತು. ನಾಯಕ ಧೋನಿಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಆಡಿದ ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಉತ್ತಮ ಆರಂಭವನ್ನೇ ಒದಗಿಸಿತು.
ಆದರೆ ಪಂದ್ಯದ 8ನೇ ಓವರ್ ನಲ್ಲಿ ಪಾಕಿಸ್ತಾನ ಸೊಹೇಲ್ ಖಾನ್ ಅವರ ಎಸೆತವೊಂದನ್ನು ತಪ್ಪಾಗಿ ಅರ್ಥೈಸಿಕೊಂಡ ರೋಹಿತ್ ಶರ್ಮಾ ಮಿಸ್ಬಾ ಉಲ್ ಹಕ್ ಗೆ ಕ್ಯಾಚಿತ್ತು ಹೊರನಡೆದರು. ಬಳಿಕ ಧವನ್ ಜೊತೆಗೂಡಿದ ವಿರಾಟ್ ಕೊಹ್ಲಿ ಉತ್ತಮವಾಗಿ ಆಡುತ್ತಿದ್ದು, ಇಬ್ಬರೂ ಆಟಗಾರರು ಇದೀಗ ಆಕರ್ಷಕ ಅರ್ಧಶತಕ ಗಳಿಸಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ಭಾರತ 2 ವಿಕೆಟ್ ನಷ್ಟಕ್ಕೆ 191ರನ್ (35 ಓವರ್ ಗಳು) ಗಳಿಸಿದೆ. ಕ್ರೀಸ್ ನಲ್ಲಿರುವ ವಿರಾಟ್ ಕೊಹ್ಲಿ 61 ರನ್ (75 ಎಸೆತಗಳು) ಮತ್ತು ಸುರೇಶ್ ರೈನಾ 16 (14 ಎಸೆತ) ಉತ್ತಮವಾಗಿ ಆಡುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ 73ರನ್ ಗಳಿಸಿದ್ದ ಶಿಖರ್ ಧವನ್ ಅವರನ್ನು ಮಿಸ್ಬಾ ಉಲ್ ಹಕ್ ರನ್ ಔಟ್ ಮಾಡಿದರು.