ಮಹತ್ವದ ಘಟ್ಟದಲ್ಲಿ ಮುಂಬೈ-ಕರ್ನಾಟಕ ಪಂದ್ಯ

ನೈಟ್‍ವಾಚ್‍ಮನ್ ಆಗಿ ಕಣಕ್ಕಿಳಿದರೂ, ಪಕ್ಕಾ ಬ್ಯಾಟ್ಸ್ ಮನ್‍ನಂತೆ ಮುಂಬೈ ಬೌಲರ್‍ಗಳ ದಾಳಿಗೆ ತಕ್ಕ ಉತ್ತರ ನೀಡಿದ ಅಭಿಮನ್ಯು ಮಿಥುನ್(89) ಹಾಗೂ ಆರ್.ಸಮರ್ಥ...
ರಣಜಿಯಲ್ಲಿ ಕರ್ನಾಟಕ ತಂಡದ ಮೈಲುಗೈ (ಸಂಗ್ರಹ ಚಿತ್ರ)
ರಣಜಿಯಲ್ಲಿ ಕರ್ನಾಟಕ ತಂಡದ ಮೈಲುಗೈ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ನೈಟ್‍ವಾಚ್‍ಮನ್ ಆಗಿ ಕಣಕ್ಕಿಳಿದರೂ, ಪಕ್ಕಾ ಬ್ಯಾಟ್ಸ್ ಮನ್‍ನಂತೆ ಮುಂಬೈ ಬೌಲರ್‍ಗಳ ದಾಳಿಗೆ ತಕ್ಕ ಉತ್ತರ ನೀಡಿದ ಅಭಿಮನ್ಯು ಮಿಥುನ್(89) ಹಾಗೂ ಆರ್.ಸಮರ್ಥ (56) ಅವರ 149 ರನ್‍ಗಳ ಶತಕದ ಜತೆಯಾಟದ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈಗೆ ಕಠಿಣ ಸವಾಲು ನೀಡಿದೆ.

ಇನ್ನು ಮುಂಬೈ ಆರಂಭಿಕರೂ ಸಹ ಎರಡನೇ ಇನಿಂಗ್ಸ್‍ನಲ್ಲಿ ಕರ್ನಾಟಕದ ಬೌಲರ್‍ಗಳಿಗೆ ಉತ್ತಮ ಪ್ರತಿರೋಧ ನೀಡಿದ್ದಾರೆ. ಹಾಗಾಗಿ, ಎರಡನೇ ದಿನದಾಟದ ಮುಕ್ತಾಯಕ್ಕೆ ಪಂದ್ಯ ರೋಚಕ ಘಟ್ಟದಲ್ಲಿ ಬಂದು ನಿಂತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಗುರುವಾರ ಕರ್ನಾಟಕ ತನ್ನ 2ನೇ ಇನ್ನಿಂಗ್ಸ್ 286 ರನ್‍ಗಳಿಗೆ ಪತನಗೊಂಡಿತು.

ಮೊದಲ ಇನಿಂಗ್ಸ್ ನ 158 ರನ್‍ಗಳ ಮುನ್ನಡೆ ಸೇರಿದಂತೆ ಮುಂಬೈಗೆ 445 ರನ್‍ಗಳ ಕಠಿಣ ಸವಾಲೆಸೆದಿರುವ ಕರ್ನಾಟಕ ಗೆಲುವಿನ ಕನಸು ಕಾಣುತ್ತಿರುವ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 286ರನ್ ಗಳಿಗೆ ಪತನಗೊಂಡಿತು. ಮೊದಲ ಇನ್ನಿಂಗ್ಲ್ ನ 158ರನ್ ಗಳ ಮುನ್ನಡೆ ಸೇರಿದಂತೆ ಮುಂಬೈಗೆ 445 ರನ್ ಗಳ ಕಠಿಣ ಸವಾಲು ಎಸೆದಿರುವ ವಿನಯ್ ಪಡೆ ಗೆಲುವಿನ ಕನಸು ಕಾಣುತ್ತಿದೆ. ಈ ಗುರಿ ಬೆನ್ನಟ್ಟಿರುವ ಮುಂಬೈ ದಿನದಾಟ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 61 ರನ್‍ಗಳಿಸಿರುವುದು ಪಂದ್ಯದಲ್ಲಿ ತೀವ್ರ ಜಿದ್ದಾಜಿದ್ದಿನ ಹೋರಾಟದ ಸುಳಿವು ದೊರೆತಿದೆ.

ಮಿಥುನ್, ಸಮರ್ಥ್ ಜತೆಯಾಟ
ಮೊದಲ ದಿನದಾಟದ ಮೊತ್ತ 2 ವಿಕೆಟ್‍ಗೆ 10 ರನ್‍ಗಳೊಂದಿಗೆ ಎರಡನೇ ದಿನದಾಟ ಮುಂದುವರಿಸಿದ ಮಿಥುನ್ ಮತ್ತು ಸಮರ್ಥ್, ಮೊದಲ ಅವ„ಯಲ್ಲಿ ಮುಂಬೈ ಬೌಲರ್ ಗಳನ್ನು ನಿರಂತರವಾಗಿ ದಂಡಿಸಿದರು. ಆದರೆ ಎರಡನೇ ಅವಧಿಯಲ್ಲಿ ಅತಿಥೇಯ ತಂಡ ಕುಸಿತ ಕಂಡಿದ್ದು ನಿರಾಸೆ ಮೂಡಿಸಿತು. 2ನೇ ದಿನಕ್ಕೆ ಆಟ ಕಾಯ್ದಿರಿಸಿದ ಆರ್ ಸಮರ್ಥ್ ಹಾಗೂ ನೈಟ್ ವಾಚ್ ಮನ್ ಅಭಿಮನ್ಯು ಮಿಥುನ್ ಉತ್ತಮ ವೇಗದಲ್ಲಿ ರನ್ ಕಲೆಹಾಕುತ್ತಾ ಇನ್ನಿಂಗ್ಸ್ ಕಟ್ಟಿದರು. 113 ಎಸೆತಗಳನ್ನು ಎದುರಿಸಿದ ಮಿಥುನ್ ಆಕರ್ಷಕ 14 ಬೌಂಡರಿಗಳನ್ನು ಬಾರಿಸಿ ಮಹತ್ವದ 89 ರನ್ ದಾಖಲಿಸಿದರು, ಸಮರ್ಥ್ 117 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ 58 ರನ್ ಗಳಿಸಿದರು. 3ನೇ ವಿಕೆಟ್‍ಗೆ ಸಮರ್ಥ್ ಮತ್ತು ಮಿಥುನ್ 149 ರನ್ ಕಲೆ ಹಾಕುವ ಮೂಲಕ ತಂಡವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ದರು.

ದುರಾದೃಷ್ಟವಶಾತ್ ಮಿಥುನ್ ಗೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮೊದಲ ಶತಕ ದಾಖಲಿಸುವ ಭಾಗ್ಯ ಇರಲಿಲ್ಲ. ಅವರು ವೈಯಕ್ತಿಕ ಗರಿಷ್ಠ ಮೊತ್ತದ ಸಾಧನೆ ಮಾಡಿದರೂ ಸಹ ಕೇವಲ 11 ರನ್‍ಗಳಿಂದ ಮೂರಂಕಿಯ ಗಡಿ ತಲುಪುವುದರಿಂದ ವಂಚಿತರಾದರು. ಮಿಥುನ್ ಬಂದ ನಂತರ ಮನೀಷ್ ಪಾಂಡೆ 42, ಕರುಣ್ ನಾಯರ್ 28, ಸಿ.ಎಂ ಗೌತಮ್ (20) ಹಾಗೂ ಶ್ರೇಯಸ್ ಗೋಪಾಲ್ (28) ಆರಂಭದಲ್ಲಿ ಉತ್ತಮ ಲಯ ತೋರಿದರೂ ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸಲಿಲ್ಲ. ಅಂತಿಮವಾಗಿ ಕರ್ನಾಟಕ ತಂಡ 286 ರನ್‍ಗಳಿಗೆ ತನ್ನ ಎರಡನೇ ಇನಿಂಗ್ಸ್‍ಗೆ ತೆರೆ ಎಳೆದುಕೊಂಡಿತು. ಮುಂಬೈ ಪರ ಶಾರ್ದುಲ್ 4, ಸುಂಧು3 ಹಾಗೂ ಹರ್ಮಿತ್ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಮುಂಬೈ ಉತ್ತಮ ಆರಂಭ
ಕರ್ನಾಟಕ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿರುವ ಮುಂಬೈ ತಂಡ ದಿನದಾಟ ಅಂತ್ಯಕ್ಕೆ 17 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 61ರನ್ ತಲೆಹಾಕಿದೆ. ಈ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿನ ಆಘಾತದ ನಂತರ ಪಂದ್ಯದಲ್ಲಿ ಮತ್ತೆ ಹೋರಾಟ ನಡೆಸುವ ಪ್ರಯತ್ನದಲ್ಲಿದೆ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಅದಿತ್ಯ ತಾರೆ 40 ಹಾಗೂ ಅಖಿಲ್ 21 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಕುತೂಹಲ ಘಟ್ಟದತ್ತ ಪಂದ್ಯ
ಪಂದ್ಯದಲ್ಲಿ ಇನ್ನೂ ಮೂರು ದಿನಗಳು ಬಾಕಿ ಇವೆ. ಮುಂಬೈ ತಂಡಕ್ಕೆ ಗೆಲವು ದಾಖಲಿಸಲು 384 ರನ್‍ಗಳ ಅಗತ್ಯವಿದೆ. ಹಾಗಾಗಿ ಪಂದ್ಯದಲ್ಲಿ ಫಲಿತಾಂಶ ಬರುವುದು ಖಚಿತವಾಗಿದೆ. ಹಾಗಾಗಿ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದೆಯಾದರೂ ನಿಟ್ಟುಸಿರು ಬಿಡುವಂತಿಲ್ಲ. ಪಂದ್ಯದಲ್ಲಿ ಸಾಕಷ್ಟು ಸಮಯದಲ್ಲಿ ಸಾಕಷ್ಟು ಸಮಯ ಉಳಿದಿರುವುದರಿಂದ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರೆ, ಮುಂಬೈ ತಂಡಕ್ಕೆ ಗೆಲುವು ಸಾಧ್ಯವಿದೆ. ಇನ್ನು ಪಿಚ್ ಮೂರನೇ ದಿನ ಬೌಲರ್ ಗಳಿಗೆ ನೆರವು ನೀಡಿದರೆ, ಕರ್ನಾಟಕಕ್ಕೆ ಗೆಲುವಿನ ಹಾದಿ ಸುಗಮವಾಗಲಿದೆ. ಹಾಗಾಗಿ ಮೂರನೇ ದಿನದಾಟದ  ಮೊದಲ ಅವಧಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

-ಸೋಮಶೇಖರ ಪಿ. ಭದ್ರಾವತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com