ಕಿವೀಸ್ ದಾಳಿಗೆ ಕಾಂಗರೂ ಕಂಗಾಲು

ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ 151 ರನ್ ಗೆ ಪತನಗೊಂಡಿದೆ...
ನ್ಯೂಜಿಲೆಂಡ್
ನ್ಯೂಜಿಲೆಂಡ್
Updated on: 

ಆಕ್ಲೆಂಡ್(ನ್ಯೂಜಿಲೆಂಡ್): ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ 151 ರನ್ ಗೆ ಪತನಗೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ನ್ಯೂಜಿಲೆಂಡ್ನ ಬೌಲರ್ ಬೌಲ್ಟ್ ಮಾರಕ ದಾಳಿಗೆ ಆಸ್ಟ್ರೇಲಿಯಾ ಆಟಗಾರರು ತತ್ತರಿಸಿದ್ದು, ಕೇವಲ 151 ರನ್ ಆಲೌಟ್ ಆಗಿದ್ದಾರೆ. ಇದರೊಂದಿಗೆ ನ್ಯೂಜಿಲೆಂಡ್ಗೆ ಗೆಲ್ಲಲು 152 ರನ್ಗಳ ಅಲ್ಪ ಮೊತ್ತವನ್ನು ನೀಡಿದೆ.

ಆಸ್ಟ್ರೇಲಿಯಾ ಪರ ಪಿಂಚ್ 14, ಡೇವಿಡ್ ವಾರ್ನರ್ 34, ವಾಟ್ಸನ್ 23, ಮೈಕಲ್ ಕ್ಲಾರ್ಕ್ 12, ಸ್ಮಿತ್ 4, ಮ್ಯಾಕ್ಸ್ವೇಲ್ 1, ಮಾರ್ಷ್ 0, ಹಡ್ಡೀನ್ 43, ಜಾನ್ಸನ್ 1, ಸ್ಟಾರ್ಕ್ 0, ಕಮ್ಮಿನ್ಸ್ ಅಜೇಯ 7 ರನ್ ಗಳಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಬೌಲ್ಟ್ 5 ವಿಕೆಟ್, ಸೌಥಿ ಹಾಗೂ ವೇಟೋರಿ ತಲಾ 2 ವಿಕೆಟ್, ಆಂಡರ್ಸನ್ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com