ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು

ಇಂಗ್ಲೆಂಡ್ ತಂಡ
ಇಂಗ್ಲೆಂಡ್ ತಂಡ
Updated on

ಬ್ರಿಸ್ಪೇನ್: ಆಸ್ಟ್ರೇಲಿಯಾದ ಬ್ರಿಸ್ಪೇನ್‌ನಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಭರ್ಜರಿ ಜಯ ಗಳಿಸಿದೆ.

ಬ್ರಿಸ್ಪೇನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಭಾರತ ನೀಡಿದ 154 ರನ್‌ಗಳ ಸಾಧಾರಣ ಮೊತ್ತವನ್ನು ಇಂಗ್ಲೆಂಡ್ ನಿರಾಸಾಯವಾಗಿ ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಟಾಪ್ ಆರ್ಡರ್ ಬ್ಯಾಟ್ಸ್‘ಮನ್‘ಗಳ ವೈಫಲ್ಯದಿಂದಾಗಿ ಕೇವಲ 153 ರನ್‘ಗಳನ್ನಷ್ಟೇ ಶಕ್ತವಾಯಿತು. ಬಾಲಂಗೋಚಿಗಳು ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ 39.3 ಓವರ್‘ಗಳಲ್ಲಿ ಭಾರತ 153 ರನ್‘ಗೆ ಆಲೌಟ್ ಆಯಿತು.

ಭಾರತದ ಅಲ್ಪ ಮೊತ್ತವನ್ನ ಬೆನ್ನತ್ತಿದ ಇಂಗ್ಲೆಂಡ್ ಆರಂಭದಿಂದಲೇ ಅಬ್ಬರಿಸಿತು. ಅದ್ಬುತ ಬ್ಯಾಟಿಂಗ್ ಮಾಡಿದ ಇಯಾನ್ ಬೆಲ್ ಅಮೋಘ 88 ರನ್ ಗಳಿಸಿದರು. ಟೇಲರ್ 54 ರನ್ ಗಳಿಸಿದರು. ಕೇವಲ 27.3 ಓವರ್‘ಗೆ ಇಂಗ್ಲೆಂಡ್ 1 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.

ಭಾರತದ ಪರ ಸ್ಟುವರ್ಟ್ ಬಿನ್ನಿ 1 ವಿಕೆಟ್ ಪಡೆದರು


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com