ಕಾಂಗರೂಗಳ ಹ್ಯಾಟ್ರಿಕ್ ಸಾಧನೆ ಭಾರತದ ಪಾಲಿಗೆ ಅತ್ಯಂತ ಕರಾಳ

ಘಟಾನುಘಟಿ ಆಟಗಾರರನ್ನು ಹೊಂದಿದ್ದರೂ ಭಾರತ, ತನ್ನ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ಸೋತು..
ಭಾರತದ ವಿರುದ್ಧ ಗೆದ್ದ ಬಾಂಗ್ಲಾ ಆಟಗಾರರ ಸಂಭ್ರಮ (ಸಂಗ್ರಹ ಚಿತ್ರ)
ಭಾರತದ ವಿರುದ್ಧ ಗೆದ್ದ ಬಾಂಗ್ಲಾ ಆಟಗಾರರ ಸಂಭ್ರಮ (ಸಂಗ್ರಹ ಚಿತ್ರ)
Updated on: 

ಘಟಾನುಘಟಿ ಆಟಗಾರರನ್ನು ಹೊಂದಿದ್ದರೂ ಭಾರತ, ತನ್ನ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ಸೋತು ಟೂರ್ನಿಯ ಮೊದಲ ಹಂತದಲ್ಲೇ ಹೊರಗುಳಿದಿದ್ದು, ಕೇವಲ ಆಟಗಾರರಷ್ಟೇ ಅಲ್ಲದೇ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ಕಾಡಿತ್ತು. ಜೊತೆಗೆ ಸಾಕಷ್ಟು ಟೀಕೆಗೆ ಗುರಿಯಾಗಬೇಕಾಯಿತು.

ಮತ್ತೊಂದೆಡೆ ಐರ್ಲೆಂಡ್ ತಂಡ ಪಾಕಿಸ್ತಾನವನ್ನು ಮಣಿಸುವ ಮೂಲಕ ಮುಂದಿನ ಹಂತಕ್ಕೆ ಪ್ರವೇಶಿಸಿತ್ತು. ಪಾಕಿಸ್ತಾನ ಸಹ ಮೊದಲ ಹಂತದಲ್ಲಿಯೇ ಹೊರಬಿದ್ದಿದ್ದು, ಅಚ್ಚರಿ ಮೂಡಿಸಿತ್ತು.

ಪಂದ್ಯಾವಳಿಯ ಆತಿಥ್ಯವನ್ನು ವೆಸ್ಟ್ ಇಂಡೀಸ್ ವಹಿಸಿಕೊಂಡಿತ್ತು. ಈ ಟೂರ್ನಿಯಲ್ಲೂ ಗೆಲವಿನ ನಾಗಾಲೋಟ ಮುಂದುವರಿಸಿದ ಆಸ್ಟ್ರೇಲಿಯಾ ಪ್ರಶಸ್ತಿ ಸುತ್ತಿನಲ್ಲಿ ಶ್ರೀಲಂಕಾ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದನ್ವಯ 53 ರನ್ ಗಳಿಂದ ಮಣಿಸಿತು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಹ್ಯಾಟ್ರಿಕ್ ವಿಶ್ವಕಪ್ ಗೆದ್ದ ತಂಡವಾಗಿ
ಹೊರಹೊಮ್ಮಿತ್ತು.

ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು, 51 ಪಂದ್ಯಗಳು ನಡೆದವು. ತಂಡಗಳನ್ನು ನಾಲ್ಕು ಗುಂಪು ಗಳನ್ನಾಗಿ ವಿಂಗಡಿಸಲಾಗಿತ್ತು. ನಂತರ ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಎಂಟರ ಘಟ್ಟಕ್ಕೆ ಪ್ರವೇಶ ಪಡೆದವು. ಇಲ್ಲಿಂದ ಅಗ್ರ 4 ತಂಡಗಳು ಸೆಮಿಫೈನಲ್ ತಲುಪಿದವು.

ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ (659 ರನ್) ಟೂರ್ನಿಯಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರನಾದರೆ, ಗ್ಲೆನ್ ಮೆಗ್ರಾತ್ (26) ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು. ಸರಣಿಶ್ರೇಷ್ಠ ಪ್ರಶಸ್ತಿಗೆ ಮೆಗ್ರಾತ್ ಭಾಜನರಾದರು.

ಇನ್ನು ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದ ನಂತರ, ತಂಡದ ಕೋಚ್ ಆಗಿದ್ದ ಬಾಬ್ ವೂಲ್ಮರ್ ಅವರು ಹೋಟೆಲ್ ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.

ಇದು ಪಾಕಿಸ್ತಾನ ತಂಡದ ಮೇಲೆ ಮತ್ತಷ್ಟು ಕರಾಳ ಆವರಿಸುವಂತೆ ಮಾಡಿತು. ಪಂದ್ಯಾವಳಿ ಆರಂಭವಾದರೂ ಆತಿಥ್ಯ ವಹಿಸಿದ್ದ ಕೆಲವು ಕ್ರೀಡಾಂಗಣಗಳು ಸಿದ್ಧವಾಗಿರಲಿಲ್ಲ. ಅಲ್ಲದೆ ಟೂರ್ನಿಯನ್ನು ಹೆಚ್ಚು ವಾಣಿಜ್ಯ ಕರಣವಾಗಿಸಲಾಗಿತ್ತು ಎಂಬ ಟೀಕೆಗಳು ವ್ಯಕ್ತವಾಗಿದ್ದು, ಟೂರ್ನಿಗೆ ಸ್ವಲ್ಪ ಹಿನ್ನಡೆ ತಂದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com