ಪೇಸ್, ಹಿಂಗಿಸ್ ಜೋಡಿಗೆ ಆಸ್ಟ್ರೇಲಿಯನ್ ಟೆನಿಸ್ ಮಿಕ್ಸ್‌ಡ್ ಡಬಲ್ಸ್ ಕಿರೀಟ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಸ್ವಿಜರ್‌ಲ್ಯಾಂಡ್‌ನ ಮಾರ್ಟೀನಾ ಹಿಂಗಿಸ್ ...
ಲಿಯಾಂಡರ್ ಪೇಸ್ ಮತ್ತು  ಮಾರ್ಟೀನಾ ಹಿಂಗಿಸ್
ಲಿಯಾಂಡರ್ ಪೇಸ್ ಮತ್ತು ಮಾರ್ಟೀನಾ ಹಿಂಗಿಸ್

ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಸ್ವಿಜರ್‌ಲ್ಯಾಂಡ್‌ನ ಮಾರ್ಟೀನಾ ಹಿಂಗಿಸ್ ಜೋಡಿಗೆ ಮಿಕ್ಸ್‌ಡ್ ಡಬಲ್ಸ್ ಪ್ರಶಸ್ತಿ ದಕ್ಕಿದೆ.

ಭಾನುವಾರ ಮೆಲ್ಬರ್ನ್ ನಡೆದ ಫೈನಲ್ ಪಂದ್ಯದಲ್ಲಿ ಪೇಸ್, ಹಿಂಗಿಸ್ ಜೋಡಿ ಫ್ರೆಂಚ್ -ಕೆನಡಾ ಜೋಡಿಯಾದ ಡೇನಿಯಲ್ ನೆಸ್ಟರ್ ಮತ್ತು ಕ್ರಿಸ್ಟೀನಾ ಲೆಡೆನೋವಿಕ್ ಜೋಡಿಯನ್ನು 6-4, 6-3  ನೇರ ಸೆಟ್ ನಿಂದ ಪರಾಭವಗೊಳಿಸಿದೆ.

ಮೊದಲ ಸೆಟ್‌ನಲ್ಲಿ  5-5 ಪಾಯಿಂಟ್‌ಗಳಿಂದ ಸ್ಪರ್ಧೆ ಎದುರಿಸಿದ ಪೇಸ್ ಅಂತಿಮವಾಗಿಗಿ 6-4 ರಿಂದ ಜಯಗಳಿಸಿದರು.

ಎರಡನೇ ಸೆಟ್‌ನಲ್ಲಿ ಲೆಡೆನೋವಿಕ್ ಮತ್ತು ನೆಸ್ಟರ್ 2-1ರಿದಂ ಮುನ್ನಡೆ ಸಾಧಿಸಿದ್ದರೂ, ಬಳಿಕ ಪೇಸ್, ಹಿಂಗಿಸ್ ಜೋಡಿ 2-2 ರಿಂದ ಡ್ರಾ ಮಾಡಿದರು. ನಂತರ ಮುನ್ನಡೆ ಸಾಧಿಸಿದ ಇವರು 6-3 ಅಂತರದಿಂದ ಎರಡನೇ ಸೆಟ್ ಜಯಗಳಿಸುವ ಮೂಲಕ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಕಿರೀಟ ಗೆದ್ದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com