ಬಂಗಾಳ ಪರ ಆಡಲಿರುವ ಓಜಾ

ಮುಂದಿನ ಸಾಲಿನಲ್ಲಿ ಬಂಗಾಳ ಪರ ಆಡುವಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ನೀಡಿದ ಆಹ್ವಾನವನ್ನು...
ಪ್ರಗ್ಯಾನ್ ಓಜಾ
ಪ್ರಗ್ಯಾನ್ ಓಜಾ
Updated on: 
ಕೋಲ್ಕತಾ: ಮುಂದಿನ ಸಾಲಿನಲ್ಲಿ ಬಂಗಾಳ ಪರ ಆಡುವಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ನೀಡಿದ ಆಹ್ವಾನವನ್ನು ತಾನು ನಿರಾಕರಿಸಲಾಗಲಿಲ್ಲ
ಎಂದು ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ತಿಳಿಸಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. 
'ಸೌರವ್ ನನ್ನ ಜತೆಗೆ ಮಾತನಾಡಿ ಬಂಗಾಳ ಪರ ಆಡುವಂತೆ ಕೇಳಿಕೊಂಡಾಗ ನಾನು ಉದ್ವೇಗಗೊಂಡೆ. ಅವರ ಈ ಆಹ್ವಾನವನ್ನು ತಿರಸ್ಕರಿಸುವ ಹಾಗೆಯೇ ಇರಲಿಲ್ಲ. ಮುಖ್ಯವಾಗಿ ಒಂದು ಎಲೈಟ್ ತಂಡದ ಪರ ಆಡುವುದು ನನ್ನ ಹಿಂಬರುವಿಕೆಗೆ ನೆರವಾಗುತ್ತದೆ. ಈ ದಿಸೆಯಲ್ಲಿ ಹೈದರಾಬಾದ್‍ನಿಂದ ಎನ್‍ಒಸಿಯನ್ನೂ ಪಡೆದಿದ್ದೇನೆ' ಎಂದು ಭಾರತದ ಪರ 24 ಟೆಸ್ಟ್ ಹಾಗೂ 18 ಏಕದಿನ ಪಂದ್ಯಗಳನ್ನು ಆಡಿರುವ ಓಜಾ ಹೇಳಿದ್ದಾರೆ.
ಓಜಾ ಮೂಲತಃ ಒಡಿಶಾದವರಾಗಿದ್ದರೂ, 2001ರಿಂದಲೂ ಹೈದರಾಬಾದ್ ಅನ್ನು ಪ್ರತಿನಿಧಿಸುತ್ತಾ ಬರುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇದೇ ತಿಂಗಳು 22ರಿಂದ ಆಗಸ್ಟ್ 1ರಿಂದ ಚೆನ್ನೈನಲ್ಲಿ ಶುರುವಾಗಲಿರುವ ಭಾರತ 'ಎ' ತಂಡದಲ್ಲಿ ಸ್ಥಾನ ಗಳಿಸಿರುವ ಓಜಾ ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com