ವಿಶ್ವ ಸ್ನೂಕರ್: ಎಂಟರಘಟ್ಟಕ್ಕೆ ಭಾರತ

12 ಬಾರಿ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಮತ್ತು ಆದಿತ್ಯ ಮೆಹ್ತಾ ಅವರನ್ನೊಳಗೊಂಡ ಭಾರತ ತಂಡ ಸ್ನೂಕರ್ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದೆ...
ಪಂಕಜ್ ಅಡ್ವಾಣಿ ಮತ್ತು ಆದಿತ್ಯ ಮೆಹ್ತಾ
ಪಂಕಜ್ ಅಡ್ವಾಣಿ ಮತ್ತು ಆದಿತ್ಯ ಮೆಹ್ತಾ

ವುಕ್ಸಿ (ಚೀನಾ): 12 ಬಾರಿ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಮತ್ತು ಆದಿತ್ಯ ಮೆಹ್ತಾ ಅವರನ್ನೊಳಗೊಂಡ ಭಾರತ ತಂಡ ಸ್ನೂಕರ್ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ
ಎಂಟರ ಘಟ್ಟಕ್ಕೆ ಪ್ರವೇಶಿಸಿದೆ.

ಶುಕ್ರವಾರ ನಡೆದ ಎ ಗುಂಪಿನ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ಭಾರತದ ಜೋಡಿ 4-1 ಫ್ರೇಮ್ ಗಳ ಅಂತರದಲ್ಲಿ ಸಿಂಗಾಪುರ ವಿರುದ್ಧ ಗೆಲವು ದಾಖಲಿಸಿತು. ಈ ಮೂಲಕ ಚೀನಾ ನಂತರ ಅಂದರೆ ದ್ವಿತೀಯ ಸ್ಥಾನ ಪಡೆದಿದೆ.

ನಾಲ್ಕು ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಎಂಟರ ಘಟ್ಟಕ್ಕೆ ಪ್ರವೇಶಿಸಿವೆ. ಭಾರತದ ಅನುಭವಿ ಆಟಗಾರರು 2-3 ಫ್ರೇಮ್ ಗಳ ಅಂತರದಲ್ಲಿ ಹಾಲಿ ಚಾಂಪಿಯನ್ ಚೀನಾ ವಿರುದ್ಧ ಕೂದಲೆಳೆಯ ಅಂತರದಲ್ಲಿ ಸೋಲನುಭವಿಸಿದರು. ಆಮೂಲಕ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವಲ್ಲಿ ವಿಫಲರಾದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com