

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ತಮ್ಮ ನಾಯಕತ್ವದಲ್ಲಿ ಸುಮಾರು 111 ಪಂದ್ಯಗಳನ್ನು ಗೆಲ್ಲಿಸುವ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ.
ವಿಶ್ವಕಪ್‌ನಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆಲುವ ಮೂಲಕ ವಿದೇಶದಲ್ಲಿ ಸುಮಾರು 59 ಪಂದ್ಯಗಳನ್ನು ಗೆದ್ದ ಖ್ಯಾತಿಗೆ ಧೋನಿ ಪಾತ್ರರಾಗಿದ್ದಾರೆ. ಸೌರವ್ ಗಂಗೂಲಿ ಒಟ್ಟು 110 ಪಂದ್ಯಗಳನ್ನು ಗೆಲ್ಲಿಸಿದ್ದ ಖ್ಯಾತಿಗೆ ಭಾಜನರಾಗಿದ್ದರು. ಇದೀಗ ಅವರ ದಾಖಲೆಯನ್ನು ಧೋನಿ ಅಳಿಸಿ ಹಾಕಿದ್ದಾರೆ.
ಸೌರವ ಗಂಗೂಲಿ ವಿದೇಶದಲ್ಲಿ 58 ಪಂದ್ಯಗಳನ್ನು ಗೆಲ್ಲಿಸಿದ್ದು, 47 ಪಂದ್ಯಗಳಲ್ಲಿ ಸೋಲು ಕಂಡಿದ್ದರು.