ಯುಎಇ ವಿರುದ್ಧ ಗೆದ್ದ ವಿಂಡೀಸ್: ಕ್ವಾಟರ್‌ಫೈನಲ್ ಆಸೆ ಜೀವಂತ

ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಯುಎಇ ವಿರುದ್ಧ ವೆಸ್ಟ್ ಇಂಡೀಸ್ 6 ವಿಕೆಟ್‌ಗಳಿಂದ ಜಯ ಗಳಿಸಿದ್ದು, ಕ್ವಾಟರ್‌ಫೈನಲ್ ಆಸೆ ಜೀವಂತವಾಗಿಸಿಕೊಂಡಿದೆ.
ವೆಸ್ಟ್‌ ಇಂಡೀಸ್‌
ವೆಸ್ಟ್‌ ಇಂಡೀಸ್‌

ನೇಪಿಯರ್: ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಯುಎಇ ವಿರುದ್ಧ ವೆಸ್ಟ್ ಇಂಡೀಸ್ 6 ವಿಕೆಟ್‌ಗಳಿಂದ ಜಯ ಗಳಿಸಿದ್ದು, ಕ್ವಾಟರ್‌ಫೈನಲ್ ಆಸೆ ಜೀವಂತವಾಗಿಸಿಕೊಂಡಿದೆ.

ನಾಯಕ ಜಾಸನ್ ಹೋಲ್ಡರ್ ಅವರ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಯುಎಇ 175 ರನ್ ಗಳಿಗೆ ಆಲೌಟಾಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್‌ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.

ಟಾಸ್‌ ಗೆದ್ದ ವೆಸ್ಟ್‌ಇಂಡೀಸ್‌ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ 47.4 ಓವರ್‌ಗಳಲ್ಲಿ 175 ರನ್‌ಗಳಿಗೆ ಆಲೌಟಾಯಿತು.

ಜಾಸನ್‌ ಹೋಲ್ಡರ್‌ ಅವರ ಬೌಲಿಂಗ್ ದಾಳಿಗೆ ಯುಎಇ 46 ರನ್‌ ಗಳಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.  ಆರಂಭಿಕ ಆಘಾತದಿಂದ ಅಲ್ಪ ಚೇತರಿಸಿಕೊಳ್ಳಲು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಅಮ್ಜದ್‌ ಜಾವೆದ್ (56), ಮತ್ತು ನಾಸಿರ್‌ ಅಜೀಜ್‌ (60) ಅವರ ಜೊತೆಯಾಟದಿಂದ ಯುಎಇ 150ರ ಗಡಿ ದಾಟಿತು.

ವೆಸ್ಟ್‌ಇಂಡೀಸ್‌ ಪರ ಜಾಸನ್‌ ಹೋಲ್ಡರ್‌ 4 ವಿಕೆಟ್‌ , ಇವರಿಗೆ ಉತ್ತಮ ಬೆಂಬಲ ನೀಡಿದ ಜೆರೊಮ್‌ ಟೇಲರ್‌ 3 ರಸೆಲ್‌ 2 ವಿಕೆಟ್ ಕಬಳಿಸಿದರು.

176 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ವೆಸ್ಟ್‌ ಇಂಡೀಸ್‌ 4 ವಿಕೆಟ್‌ ನಷ್ಟಕ್ಕೆ 30.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಜಾಸನ್‌ ಚಾರ್ಲ್ಸ್‌ (55) ಹಾಗೂ ಜೊನಾಥನ್‌ ಕಾರ್ಟರ್‌ (50) ಅರ್ಧಶತಕ ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com