

ನವದೆಹಲಿ: ಭಾರತದ ಅಗ್ರ ಶ್ರೇಯಾಂಕದ ಶಟ್ಲರ್ ಸೈನಾ ನೆಹ್ವಾಲ್, ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ತಲುಪಿದ್ದಾರೆ.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಇಂಡೋನೇಷ್ಯಾದ ಹನಾ ರಮಧಿನಿ ವಿರುದ್ಧ 21-15, 21-12 ಗೇಮ್ ಗಳ ಅಂತರದಲ್ಲಿ ಸೋಲಿಸಿ ಇದೇ ಮೊದಲ ಬಾರಿಗೆ ಈ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು. ಆದರೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತಕ್ಕೆ ಶುಕ್ರವಾರ ನಿರಾಸೆ ತಂದಿತು. ಬುಧವಾರವಷ್ಟೇ ತಮ್ಮ ಪ್ರೀ ಕ್ವಾರ್ಟರ್ ಫೈನಲ್ ಹಂತದ ಪಂದ್ಯದಲ್ಲಿ ವಿಶ್ವದ 2ನೇ ಶ್ರೇಯಾಂಕದ ಜಾನ್ ಜಾರ್ಗೆನ್ಸನ್ (ಡೆನ್ಮಾರ್ಕ್) ಅವರನ್ನು ಸೋಲಿಸುವ ಮೂಲಕ ದೈತ್ಯ ಸಂಹಾರಿ ಎಂದು ಪರಿಗಣಿಸಲ್ಪಟ್ಟಿದ್ದ ಎಚ್.ಎಸ್. ಪ್ರಣಯ್, ಕ್ವಾರ್ಟರ್ ಫೈನಲ್‍ನಲ್ಲಿ ತಮ್ಮ ಪಯಣ ಅಂತ್ಯಗೊಳಿಸಿದರು.
ವಿಶ್ವದ 6ನೇ ಶ್ರೇಯಾಂಕಿತ ವಿಕ್ಟರ್ ಆಕ್ಸೆಲ್ಸನ್ ವಿರುದ್ಧ ಸೆಣಸಿದ ಅವರು, 16-21, 21-9, 21-8 ಗೇಮ್ ಗಳ ಅಂತರದಲ್ಲಿ ಸೋಲು ಕಂಡರು. ಇನ್ನು, ಪುರುಷರ ಸಿಂಗಲ್ಸ್ ವಿಭಾಗದ
ಮತ್ತೊಂದು ಪಂದ್ಯದಲ್ಲಿ ಕದನಕ್ಕಿಳಿದಿದ್ದ ಕಾಮನ್ವೆಲ್ತ್ ಕಂಚಿನ ಪದಕ ವಿಜೇತ ಭಾರತದ ಗುರುಸಾಯಿದತ್, ಚೀನಾದ ಕ್ಸೆ ಸಾಂಗ್ ವಿರುದಟಛಿ 21-15, 18-21, 13-21 ಗೇಮïಗಳ ಅಂತರದಲ್ಲಿ ಪರಾಭವ ಹೊಂದಿದರು.