ವೆಸ್ಟ್ ಇಂಡೀಸ್‍ಗೆ ಭರ್ಜರಿ ಜಯ

ಮಧ್ಯಮ ಕ್ರಮಾಂಕದಲ್ಲಿ ಡಾರೆನ್ ಬ್ರಾವೊ ಮತ್ತು ಜರ್ಮೇನ್ ಬ್ಲ್ಯಾಕ್‍ವುಡ್ ಉತ್ತಮ ಶತಕದ ಜೊತೆಯಾಟ ನೀಡುವ ಮೂಲಕ ಇಂಗ್ಲೆಂಡ್ ವಿರುದ್ಧದ ಮೂರನೇ...
ವೆಸ್ಟ್ ಇಂಡೀಸ್-ಇಂಗ್ಲೆಂಡ್ ನಡುವಿನ ಪಂದ್ಯ
ವೆಸ್ಟ್ ಇಂಡೀಸ್-ಇಂಗ್ಲೆಂಡ್ ನಡುವಿನ ಪಂದ್ಯ

ಬ್ರಿಜ್‍ಟೌನ್: ಮಧ್ಯಮ ಕ್ರಮಾಂಕದಲ್ಲಿ ಡಾರೆನ್ ಬ್ರಾವೊ ಮತ್ತು ಜರ್ಮೇನ್ ಬ್ಲ್ಯಾಕ್‍ವುಡ್ ಉತ್ತಮ ಶತಕದ ಜೊತೆಯಾಟ ನೀಡುವ ಮೂಲಕ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್  ಇಂಡೀಸ್ ತಂಡಕ್ಕೆ ಭರ್ಜರಿ ಗೆಲವು ತಂದುಕೊಟ್ಟಿದ್ದಾರೆ.

ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 5 ವಿಕೆಟ್‍ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಕೇವಲ ಮೂರು ದಿನಗಳ ಆಟದಲ್ಲಿಯೇ ವಿಂಡೀಸ್ ಪಡೆ ಗೆಲವಿನ ಕೇಕೆ ಹಾಕಿತು. ಆ ಮೂಲಕ ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರಿಂದ ಡ್ರಾ ಮಾಡಿಕೊಳ್ಳುವಲ್ಲಿ ಆತಿಥೇಯರು ಯಶಸ್ವಿಯಾದರು. ಮೊದಲ ಇನಿಂಗ್ಸ್‍ನಲ್ಲಿ 68 ರನ್‍ಗಳ ಮುನ್ನಡೆ ಸಾಧಿಸಿದ್ದ ಇಂಗ್ಲೆಂಡ್, ಎರಡನೇ ಇನಿಂಗ್ಸ್‍ನಲ್ಲಿ ಕೇವಲ 123 ರನ್‍ಗಳಿಗೆ ಆಲೌಟಾಯಿತು. ಹಾಗಾಗಿ, 192 ರನ್‍ಗಳ ಸಾಧಾರಣ ಗುರಿ ಪಡೆದಿದ್ದ ವೆಸ್ಟ್ ಇಂಡೀಸ್ 5 ವಿಕೆಟ್ ಕಳೆದುಕೊಂಡು ದಡ ಸೇರುವಲ್ಲಿ ಸಫಲವಾಯಿತು.

ಬ್ರಾವೊ ಮತ್ತು ಬ್ಲ್ಯಾಕ್‍ವುಡ್ ಐದನೇ ವಿಕೆಟ್ ಜೊತೆಯಾಟದಲ್ಲಿ 108 ರನ್ ಪೇರಿಸುವ ಮೂಲಕ ವೆಸ್ಟ್ ಇಂಡೀಸ್ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬ್ಲ್ಯಾಕ್‍ವುಡ್ ಪಂದ್ಯಶ್ರೇಷ್ಠ ಹಾಗೂ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com