ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ಮಿಚೆಲ್ ಜಾನ್​ಸನ್ ವಿದಾಯ

ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್​ಸನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ್ದಾರೆ...
ಮಿಚೆಲ್ ಜಾನ್​ಸನ್
ಮಿಚೆಲ್ ಜಾನ್​ಸನ್
ಪರ್ತ್: ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್​ಸನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ್ದಾರೆ. 
ಇಂದು ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಡ್ರಾ ಆಗಿದ್ದು, ಎರಡು ವಿಕೆಟ್ ಗಳನ್ನು ಕಬಳಿಸಿದ ಮಿಚೆಲ್ ಜಾನ್​ಸನ್ ಎಲ್ಲಾ ಅಂತಾರಾಷ್ಟ್ರೀಯ ಮಾದರಿ ಕ್ರಿಕೆಟ್ ಗೂ ವಿದಾಯ ಘೋಷಿಸಿದ್ದಾರೆ. 
ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಲು ಇದು ಸಕಾಲ ಎನಿಸುತ್ತಿದೆ. ಅದೇ ಕಾರಣಕ್ಕಾಗಿ ಗುಡ್​ ಬೈ ಹೇಳುತ್ತಿದ್ದೇನೆ. ಇಷ್ಟು ದಿನ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇದ್ದು ಕಳೆದಿರುವ ದಿನಗಳು, ಅನುಭವ ನಿಜಕ್ಕೂ ಮರೆಯಲಾಗದು. ಸಾಕಷ್ಟು ಕ್ಷಣಗಳಲ್ಲಿ ಖುಷಿ ಪಟ್ಟಿದ್ದೇನೆ. ದೇಶಕ್ಕಾಗಿ ಆಡಿರುವ ಹೆಮ್ಮೆ ಇದೆ ಎಂದು ಮಿಚೆಲ್ ಜಾನ್​ಸನ್ ಹೇಳಿದ್ದಾರೆ. 
ಮಿಚೆಲ್ ಜಾನ್​ಸನ್ ಸಾಧನೆ
153 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ಜಾನ್​ಸನ್ 239 ವಿಕೆಟ್ ಸಂಪಾದಿಸಿದ್ದು,  951 ರನ್ ಸಿಡಿಸಿದ್ದಾರೆ. 
72 ಟೆಸ್ಟ್ ಪಂದ್ಯಗಳನ್ನಾಡಿರುವ ಮಿಚೆಲ್ ಜಾನ್​ಸನ್ 310 ವಿಕೆಟ್ ಸಂಪಾದಿಸಿ, 2034 ರನ್ ಗಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com