ಚೆನ್ನೈ ವಿರುದ್ಧ ಅಟ್ಲೆಟಿಕೊ ಡಿ ಕೋಲ್ಕತಾಗೆ ಜಯ

ಆತಿಥೇಯ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ಧ ಜಯಿಸಿದೆ.
ಚೆನ್ನೈ ವಿರುದ್ಧ ಅಟ್ಲೆಟಿಕೊ ಡಿ ಕೋಲ್ಕತಾಗೆ ಜಯ
ಚೆನ್ನೈ ವಿರುದ್ಧ ಅಟ್ಲೆಟಿಕೊ ಡಿ ಕೋಲ್ಕತಾಗೆ ಜಯ
Updated on

ಕೋಲ್ಕತ್ತಾ: ಪಂದ್ಯದ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ದ್ವಿತೀಯಾರ್ಧದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಆತಿಥೇಯ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ಧ ಜಯಿಸಿದೆ.
ಬುಧವಾರ ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಟ್ಲೆಟಿಕೊ ಡಿ ಕೋಲ್ಕತಾ ತಂಡ 2-1 ಗೋಲುಗಳ ಅಂತರದಲ್ಲಿ ಚೆನ್ನೈಯಿನ್ ಎಫ್ ಸಿ ತಂಡವನ್ನು ಮಣಿಸಿತು.
ಈ ಗೆಲುವಿನೊಂದಿಗೆ ಹಾಲಿ  ಚಾಂಪಿಯನ್ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಅಂಕಪಟ್ಟಿಯಲ್ಲಿ 17 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೇರಿದೆ. ಇನ್ನು ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿರುವ ಚೆನ್ನೈಯಿನ್ ಎಫ್.ಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಅಟ್ಲೆಟಿಕೊ ಡಿ ಕೋಲ್ಕತಾ ತಂಡದ ಪರ ಸಮೇಘ್ ಡೌಟಿ 45ನೇ ಹಾಗೂ ಇಯಾನ್ ಹ್ಯೂಮೆ 63ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಚೆನ್ನೈಯಿನ್ ಎಫ್ ಸಿ ಪರ ರಾಫೆಲ್ ಆಗಸ್ಟಾ 27ನೇ ನಿಮಿಷದಲ್ಲಿ ಏಕೈಕ ಗೋಲು ಹೊಡೆದರು.
ಪಂದ್ಯದ ಆರಂಭದಲ್ ಯೇ ಚೆಂಡಿನ ಮೇಲೆ ಉತ್ತಮ ನಿಯಂತ್ರಣ ಸಾಧಿಸಿದ್ದ ಚೆನ್ನೈಯಿನ್ ಎಫ್ ಸಿ ಉತ್ತಮ ಆರಂಭ ಪಡೆದಿತ್ತು. ಆ ಮೂಲಕ ಆತಿಥೇಯ ತಂಡಕ್ಕೆ ಉತ್ತಮ ರೀತಿಯಲ್ಲಿ ಸವಾಲೆಸೆಯಿತು. ಪಂದ್ಯದ 27ನೇ ನಿಮಿಷದಲ್ಲಿ ರಾಫೆಲ್ ಅಗಸ್ಟಾ ಅವರ ಗೋಲಿನಿಂದ ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಹಿಡಿತ ಸಾ„ಸುವ ಪ್ರಯತ್ನ ನಡೆಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com