ಸರ್ದಾರ್ ಪಡೆಗೆ ಆಘಾತ

ಗೊನ್ಸಾಲೊ ಪೀಲಟ್ ಗಳಿಸಿದ ಎರಡು ಗೋಲುಗಳ ನೆರವಿನೊಂದಿಗೆ ಅತ್ಯಂತ ಆಕ್ರಮಣಕಾರಿ ಆಟವಾಡಿದ ಪ್ರವಾಸಿ ಅರ್ಜೆಂಟೀನಾ, ಆತಿಥೇಯ ಭಾರತಕ್ಕೆ...
ಭಾರತೀಯ ಹಾಕಿ ತಂಡ
ಭಾರತೀಯ ಹಾಕಿ ತಂಡ
ರಾಯ್ಪುರ: ಗೊನ್ಸಾಲೊ ಪೀಲಟ್ ಗಳಿಸಿದ ಎರಡು ಗೋಲುಗಳ ನೆರವಿನೊಂದಿಗೆ ಅತ್ಯಂತ ಆಕ್ರಮಣಕಾರಿ ಆಟವಾಡಿದ ಪ್ರವಾಸಿ ಅರ್ಜೆಂಟೀನಾ, ಆತಿಥೇಯ ಭಾರತಕ್ಕೆ
ವಿಶ್ವ ಹಾಕಿ ಲೀಗ್ ಫೈನಲ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಆಘಾತ ನೀಡಿದೆ. ಇಲ್ಲಿನ ಸರ್ದಾರ್ ವಲ್ಲಭಭಾಯ್  ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ `ಬಿ' ಗುಂಪಿನ ಮೊದಲ ಪಂದ್ಯದಲ್ಲಿ ಏಕಪಕ್ಷೀಯ ಪ್ರದರ್ಶ ನ ನೀಡಿದ ಅರ್ಜೆಂಟೀನಾ ಪರ ಗೊನ್ಸಾಲೊ ಪೀಲಾತ್ (2ನಿ.), ಮೆನಿನಿ ಜಾಕ್ವಿನ್ (11 ನಿ.) ಹಾಗೂ 60ನೇ ನಿಮಿಷದಲ್ಲಿ ಗೊನ್ಸಾಲೋ ಪೀಲಾಟ್   ಗಳಿಸಿದ ಗೋಲಿನಿಂದ ಅರ್ಜೆಂಟಿನಾ 3-0 ಗೋಲುಗಳಿಂದ ಭಾರತದ ವಿರುದ್ಧ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಭಾರತದ ಪಾಲಿಗೆ ಆಘಾತಕಾರಿ ಸಂಗತಿ ಎಂದರೆ ಈ ಮೂರೂ ಗೋಲುಗಳಉ ಪೆನಾಲ್ಟಿ  ಗೋಲಾಗಿದ್ದುದು.ಇದೀಗ ಶನಿವಾರ ನಡೆಯಲಿರುವ ಗ್ರೇಟ್ ಬ್ರಿಟನ್ ವಿರುದ್ಧದ ಪಂದ್ಯದಲ್ಲಿ ಗೆಲವು ಸಾಧಿಸಿ ಭಾರತ ತಿರುಗೇಟು ನೀಡಬೇಕಿದೆ.
ಹಾಲೆಂಡ್-ಜರ್ಮನಿ ಪಂದ್ಯ ಡ್ರಾ: ಶುಕ್ರವಾರ ನಡೆದ ಮತ್ತೊಂದು ಪಂದ್ಯದಲ್ಲಿ ಹಾಲೆಂಡ್ ಹಾಗೂ ಜರ್ಮನಿ ಸೆಣಸಿದವು. ಇತ್ತಂಡಗಳ ರಕ್ಷಣಾ ವಿಭಾಗದ ಉತ್ತಮ ಪ್ರದರ್ಶನ, ಗೋಲ್ ಕೀಪರ್‍ಗಳ ಅದ್ಭುತ ಫಾರ್ಮ್ ನಿಂದಾಗಿ ಪಂದ್ಯವು ಯಾವುದೇ ಗೋಲು ಇಲ್ಲದೆ (0-0) ನೀರಸ ಡ್ರಾ ಕಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com