ಸೆಮೀಸ್ ಗೆ ಭೋಪಣ್ಣ ಜೋಡಿ ಲಗ್ಗೆ

ಭಾರತದ ಖ್ಯಾತ ಟೆನಿಸ್ ಆಟಗಾರ ರೋಹನ್ ಭೋಪಣ್ಣ ಹಾಗೂ ಪೋಲೆಂಡ್ ನ ಲುಕಾಸ್ ಕುಬೋಟ್ ಜೋಡಿಯು ಉತ್ತಮ ಪ್ರದರ್ಶನ ನೀಡುವ ಮೂಲಕ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದೆ.
ರೋಹನ್ ಭೋಪಣ್ಣ
ರೋಹನ್ ಭೋಪಣ್ಣ

ಶಾಂಘೈ: ಭಾರತದ ಖ್ಯಾತ ಟೆನಿಸ್ ಆಟಗಾರ ರೋಹನ್ ಭೋಪಣ್ಣ ಹಾಗೂ ಪೋಲೆಂಡ್ ನ ಲುಕಾಸ್ ಕುಬೋಟ್ ಜೋಡಿಯು ಉತ್ತಮ ಪ್ರದರ್ಶನ ನೀಡುವ ಮೂಲಕ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದೆ.

ಶುಕ್ರವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಸುತ್ತಿನ ಪಂದ್ಯದಲ್ಲಿ ರೋಹನ್ ಭೋಪಣ್ಣ ಜೋಡಿ ತಮ್ಮ ಪ್ರತಿಸ್ಪರ್ಧಿ ಜೋಡಿ ಮ್ಯಾಕ್ಸ್ ಮಿರ್ನಿಯಿ ಮತ್ತು ಫೆಲಿಸಿಯಾನೋ ಲೋಪೆಜ್ ಜೋಡಿಯನ್ನು 6 -4 -7 -5 ನೇರ ಸೆಟ್ ಗಳ ಅಂತರದಲ್ಲಿ ಮಣಿಸಿತು. ಈ ಜೋಡಿಯು ತಮ್ಮ ಮುಂದಿನ ಪಂದ್ಯದಲ್ಲಿ ಆರನೇ ಶ್ರೇಯಾಂಕಿತ ಮಾರ್ಸೆಲೋ ಮೇಲೊ ಮತ್ತು ರಾವೆನ್ ಕ್ಲಾಸೇನ್ ಜೋಡಿಯನ್ನು ಎದುರಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com