ಮುಂಬೈನಲ್ಲಿ ನಡೆದ ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ನೂತನ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ನೇತೃತ್ವದಲ್ಲಿ ನಡೆದ ಸಭೆ ವೇಳೆ ಕೆಲವು ಸದಸ್ಯರು ಅಮಾನತುಗೊಂಡಿರುವ ತಂಡಗಳನ್ನು ಲೀಗ್ ನಲ್ಲಿ ಉಳಿಸಿಕೊಳ್ಳಲು ತೋರಿದ್ದರು. ಆದರೆ ಮಂಡಳಿ ಸುಪ್ರಿಂಕೋರ್ಟ್ ನೇಮಿಸಿದ ನ್ಯಾ ಲೋಧಾ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಸಿಎಸ್ ಕೆ ಹಾಗೂ ಆರ್ ಆರ್ ತಂಡಗಳ ಅಮಾನತನ್ನು ಮುಂದುವರಿಸಲು ತೀರ್ಮಾನಿಸಿದೆ. ಉಭಯ ತಂಡಗಳು 2018ರ ಲೀಗ್ ನಲ್ಲಿ ಆಡಲು ಅರ್ಹತೆ ಪಡೆಯಲಿವೆ.