ಟೀಂ ಇಂಡಿಯಾಗೆ 439 ರನ್ ಗಳ ಬೃಹತ್ ಸವಾಲು

ಟೀಂ ಇಂಡಿಯಾ ವಿರುದ್ಧದ ಐದನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 438 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದರೊಂದಿಗೆ ಭಾರತ ಸರಣಿ ಗೆಲ್ಲಲು 439 ರನ್ ಗಳ ಬೃಹತ್...
ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ
Updated on: 
ಮುಂಬೈ: ಟೀಂ ಇಂಡಿಯಾ ವಿರುದ್ಧದ ಐದನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 438 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದರೊಂದಿಗೆ ಭಾರತ ಸರಣಿ ಗೆಲ್ಲಲು 439 ರನ್ ಗಳ ಬೃಹತ್ ಮೊತ್ತವನ್ನು ಗಳಿಸಬೇಕಿದೆ. 
ವಾಂಖಡೇ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ಭಾರತದೊಂದಿಗಿನ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರ ಕ್ಲಿಂಟನ್‌ ಡಿ ಕಾಕ್‌ 109 ರನ್ ಸಿಡಿಸಿ ಔಟಾದರು. ಆಮ್ಲಾ 13 ಎಸೆತಗಳಲ್ಲಿ 23 ರನ್ ಗಳಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಎಬಿಡಿ ವಿಲಿಯರ್ಸ್ ಕೇಲವ 61 ಎಸೆತಗಳಲ್ಲಿ 119 ರನ್ ಸಿಡಿಸಿದರು. ಡುಪ್ಲೇಸಿಸ್ ಸಹ ಭರ್ಜರಿ ಬ್ಯಾಟಿಂಗ್ ನೊಂದಿಗೆ 115 ಎಸೆತಗಳಲ್ಲಿ 133 ರನ್ ಸಿಡಿಸಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.
ಬೇಹರ್ಡಿನ್ 16 ರನ್ ಗಳಿಸಿ ಔಟಾದರೆ ಡೇವಿಡ್ ಮಿಲ್ಲರ್ ಅಜೇಯ 22 ಹಾಗೂ ಹಿಲ್ಗರ್ ಅಜೇಯ 5 ರನ್ ಗಳಿಸಿದ್ದಾರೆ.
ಭಾರತದ ಪರ ಮೋಹಿತ್‌ ಶರ್ಮಾ, ಭುವನೇಶ್ವರ್ ಕುಮಾರ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ತಲಾ  1 ವಿಕೆಟ್‌ ಪಡೆದಿದ್ದಾರೆ.
ಸರಣಿಯ ಆರಂಭದ ನಾಲ್ಕು ಪಂದ್ಯಗಳಲ್ಲಿ ಎರಡೂ ತಂಡಗಳು ತೀವ್ರ ಹೋರಾಟ ನೀಡಿದ್ದರಿಂದ 2-2 ಸಮಬಲ ಸಾಧಿಸಲು ಸಾಧ್ಯವಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com