

ದುಬೈ:ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಏಕದಿನ ಪಂದ್ಯ ಸರಣಿಯನ್ನು 2-3ರಿಂದ ಸೋತರೂ,ಟೀಂ ಇಂಡಿಯಾ ಅಂತಾರಾಷ್ಟ್ರೀಯ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಈ ಹಿಂದಿನ 2ನೇ ಸ್ಥಾನದಲ್ಲೇ ಮುಂದುವರೆದಿದೆ.
ಐದು ಪಂದ್ಯ ಸರಣಿಯಲ್ಲಿ ಒಂದು ಶತಕ ಸೇರಿದಂತೆ ಒಟ್ಟಾರೆ 245 ರನ್ ಪೇರಿಸಿದ ಕೊಹ್ಲಿ, ಏಕದಿನ ಬ್ಯಾಟ್ಸ್ ಮನ್‍ಗಳ ಪೈಕಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಆದರೆ, ಬಿಡುಬೀಸಿನ ಆಟಗಾರ ಎಬಿಡಿವಿಲಿಯರ್ಸ್ ಅಗ್ರ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಭಾರತ (114 ಪಾಯಿಂಟ್ಸ್) ತಂಡದ ವಿರುದ್ಧ ಸರಣಿ ಗೆದ್ದರೂ, ದ.ಆಫ್ರಿಕಾ (112 ಪಾಯಿಂಟ್ಸ್) ಟೀಂ ರ್ಯಾಂಕಿಂಗ್ ನಲ್ಲಿ 3ನೇ ಸ್ಥಾನದಲ್ಲೇ ಮುಂದುವರಿದಿದೆ.127 ಅಂಕ ಗಳಿಸಿರುವ ಕಾಂಗರೂ ಪಡೆ ವಿಶ್ವದ ನಂ.1 ಏಕದಿನ ಕ್ರಿಕೆಟ್ ತಂಡ ಎನಿಸಿದೆ.