ಭಾರತ ಹಾಕಿ ತಂಡದ ನ್ಯೂಜಿಲೆಂಡ್ ಪ್ರವಾಸ

ಮುಂದಿನ ತಿಂಗಳ 2 ರಿಂದ 11 ವರೆಗೆ ಭಾರತದ ಪುರುಷರ ರಾಷ್ಟ್ರೀಯ ತಂಡ ನ್ಯುಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ ಎಂದು ದ ಹಿಂದೂ ವರದಿ ಮಾಡಿದೆ.
ಭಾರತ ಹಾಕಿ ತಂಡ
ಭಾರತ ಹಾಕಿ ತಂಡ

ನವದೆಹಲಿ: ಮುಂದಿನ ತಿಂಗಳ 2 ರಿಂದ 11 ವರೆಗೆ ಭಾರತದ ಪುರುಷರ ರಾಷ್ಟ್ರೀಯ ಹಾಕಿ ತಂಡ ನ್ಯುಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ ಎಂದು ದ ಹಿಂದೂ ವರದಿ ಮಾಡಿದೆ.

ಅಲ್ಲಿನ ರಾಷ್ಟ್ರೀಯ ತಂಡದ ವಿರುದ್ಧ ಭಾರತ ತಂಡ ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಲಿದ್ದು, ನೆಲ್ಸನ್ ನಲ್ಲಿ ಅ.6 ಹಾಗೂ 7 ರಂದು ಮೊದಲೆರಡು ಪಂದ್ಯಗಳು ನಡೆಯಲಿವೆ. ಇನ್ನೆರಡು ಪಂದ್ಯಗಳು ಅ.9 ಹಾಗೂ 10 ರಂದು ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿವೆ. ಇದಕ್ಕೂ ಮುನ್ನ ಅ.2 ಹಾಗೂ 3 ರಂದು ಎರಡು ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡ ಪಾಲ್ಗೊಳ್ಳಲಿದೆ.

ನ್ಯೂಜಿಲೆಂಡ್ ಸರಣಿಯ ನಂತರ ಸ್ವದೇಶಕ್ಕೆ ಹಿಂದಿರುಗಲಿರುವ ಭಾರತ ತಂಡ, ನವೆಂಬರ್ 20 -30 ರ ಅವಧಿಯಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಚುಟುಕು ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿ ರಾಯಪುರದಲ್ಲಿ ನ.27 ರಿಂದ ಡಿ.6 ವರೆಗೆ ವಿಶ್ವ ಹಾಕಿ ಲೀಗ್ ಫೈನಲ್ ನಲ್ಲಿ ಭಾಗವಹಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com