ಯುವಿ ಸೂಪರ್ ಸಿಕ್ಸ್‌ಗೆ 8 ವರ್ಷ!

ಭಾರತದ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಎಂದರೆ ತಟ್ಟನೆ ನೆನಪಾಗುವುದು 2007ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್‍ನ...
ಯುವರಾಜ್ ಸಿಂಗ್
ಯುವರಾಜ್ ಸಿಂಗ್
Updated on: 
ನವದೆಹಲಿ: ಭಾರತದ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಎಂದರೆ ತಟ್ಟನೆ ನೆನಪಾಗುವುದು 2007ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್‍ನ ಸ್ಟುವರ್ಟ್ ಬ್ರಾಡ್‍ಗೆ ಒಂದೇ ಓವರ್‍ನಲ್ಲಿ ಸತತ ಆರು ಸಿಕ್ಸರ್ ಬಾರಿಸಿದ್ದು. ಈ ಅಭೂತ ಪೂರ್ವ ಸಾಧನೆ ಹೊರಬಂದು ಸೆ.19ಕ್ಕೆ 8 ವಸಂತಗಳು ಕಳೆದಿವೆ. 
ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತಕ್ಕೆ ಆರಂಭಿಕರಾದ ವಿರೇಂದ್ರ ಸೆಹ್ವಾಗ್ (68) ಮತ್ತು ಗೌತಮ್ ಗಂಭೀರ್(58) ಉತ್ತಮ ಆರಂಭ ನೀಡಿದ್ದರು. ಇನಿಂಗ್ಸ್ ಕಡೇ ಹಂತದಲ್ಲಿ ಕ್ರೀಸ್‍ಗೆ ಬಂದಿದ್ದ ಯುವರಾಜ್ ಸಿಂಗ್ ಅವರನ್ನು 18ನೇ ಓವರ್ ನಂತರ ಆಲ್ರೌಂಡರ್ ಆ್ಯಂಡ್ರೂ ಫ್ಲಿಂಟಾಫ್ ಕೆಣಕಿ ಮಾತಿನ ಚಕಮಕಿ ನಡೆಸಿದರು. 
ಆಗ 19ನೇ ಓವರ್‍ನಲ್ಲಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಆಂಗ್ಲರ ವಿರುದ್ಧ ಬೊಬ್ಬಿರಿದಿದ್ದರು. ಅಲ್ಲದೆ ಪಂದ್ಯದಲ್ಲಿ 12 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿ ಟಿ20ಯಲ್ಲಿ ವೇಗದ ಅರ್ಧಶತಕ ಬಾರಿಸಿದ್ದು, ಈಗಲೂ ವಿಶ್ವದಾಖಲೆಯಾಗಿ ಉಳಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com