ಮರಿಯಾ ಶರಾಪೋವಾ
ಮರಿಯಾ ಶರಾಪೋವಾ

ಶರಾಪೋವಾಗೆ ಒಳ್ಳೇ ಹುಡ್ಗ ಬೇಕಂತೆ!

ಫುಟ್ಬಾಲ್‌ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋಗೆ 25 ಗರ್ಲ್‌ಫ್ರೆಂಡ್ ಕೇಳಿ ನೀವು ಹುಬ್ಬೇರಿಸಿರಬಹುದು. ಟೆನಿಸ್‌ನಲ್ಲಿ ಇದೇ ಥರ ಒಬ್ಬಳಿದ್ದಾಳೆ...
Published on

ಫುಟ್ಬಾಲ್‌ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋಗೆ 25 ಗರ್ಲ್‌ಫ್ರೆಂಡ್ ಕೇಳಿ ನೀವು ಹುಬ್ಬೇರಿಸಿರಬಹುದು. ಟೆನಿಸ್‌ನಲ್ಲಿ ಇದೇ ಥರ ಒಬ್ಬಳಿದ್ದಾಳೆ. ಆದರೆ, ಹುಡುಗಿಯಾದ ಕಾರಣಕ್ಕೋ ಏನೋ ಈಕೆ ಸಂಗಾತಿಯ ಸಂಖ್ಯೆಯನ್ನು ಅಷ್ಟೊಂದು ಬೆಳಯಬಿಟ್ಟಿಲ್ಲ. ಆದರೆ ಸದ್ಯ ಚಾಲ್ತಿಯಲ್ಲಿರುವ ಟೆನಿಸ್ ಆಟಗಾರ್ತಿಯರಿಗಿಂತ ಹೆಚ್ಚು ಬಾಯ್‌ಫ್ರೆಂಡ್‌ಗಳನ್ನು ಕಂಡವಳು ಇವಳು. ರಷ್ಯಾದ ಟೆನಿಸ್ ಸ್ಫುರದ್ರೂಪಿ ಮರಿಯಾ ಶರಾಪೋವಾ ಇದುವರೆಗೆ 4 ಬಾಯ್‌ಫ್ರೆಂಡ್‌ಗಳಿಗೆ ಕೈಕೊಟ್ಟು ಈಗ ಐದನೆಯವನಿಗೆ ಹುಡುಕಾಡುತ್ತಿದ್ದಾಳೆ! ಮರಿಯಾಗೆ ಯೋಗ್ಯ ಬಾಯ್‌ಫ್ರೆಂಡ್ ಇನ್ನೂ ಸಿಕ್ಕಿಲ್ವಂತೆ!

ಹಾಲಿವುಡ್ ಹೀರೋಯಿನ್‌ಗೂ ಒಂದು ಸ್ಟೆಪ್ ಮೇಲೆ ಅನ್ನೋ ಬ್ಯೂಟಿಯ ಈಕೆ ಈಗ ಖಾಲಿ ಇದ್ದಾಳೆ. ಬಲ್ಲೇರಿಯಾದ ಟೆನಿಸಿಗ ಗ್ರಿಗೋರ್ ಡಿಮಿಟ್ರೊವ್ ಜೊತೆ ಸುತ್ತಾಡಿ, ಕೊನೆಗೂ ಅವನನ್ನು ಕೈಬಿಟ್ಟು ಒಂದು ತಿಂಗಳಾಯಿತು. ಮರಿಯಾ ಶಾರಪೋವಾಳ ಸಿಡುಕತನ ಗ್ರಿಗೋರ್‌ಗೆ ಇಷ್ಟ ಆಗ್ಲಿಲ್ವಂತೆ. ಸಿಲ್ಲಿ ಕಾರಣಕ್ಕೆ ಒಮ್ಮೆ ಮುನಿಸಿಕೊಂಡು ತಿಂಗಳಾನುಗಟ್ಟಲೇ ಫೋನ್ ಮಾಡದೇ ಇರುವುದನ್ನು ನೋಡಿ ಕೊನೆಗೆ ಗ್ರಿಗೋರ್ ಕಳೆದ ತಿಂಗಳು ಪಬ್ಲಿಕ್ಕಾಗಿಯೇ ಘೋಷಿಸಿಬಿಟ್ಟ; 'ನನ್ನ ಮತ್ತು ಮರಿಯಾಳ ಪ್ರೇಮ ಸಂಬಂಧ ಮುಗಿದಿದೆ ಅಂತ. ಆದರೆ, ಗ್ರಿಗೋರಿ ಈ ಪ್ರಮೇ ವಿಚ್ಛೇಧನಕ್ಕೆ ಕಾರಣ ತಿಳಿಸಿಲ್ಲ. ತನ್ನ ಟೆನಿಸ್ ಕೆರಿಯರ್ ಕಡೆಗೆ ಹೆಚ್ಚು ಗಮನ ಕೊಡಲು ಅವಳಿಂದ ದೂರ ಆಗಿದ್ದೀನಿ ಅಂತ ನುಣುಚಿಕೊಂಡ. ಮರಿಯಾ ಈ ಬಗ್ಗೆ ಏನೂ ಮಾತೆ ಆಡಲಿಲ್ಲ.'

ಮರಿಯಾಳ ಕೆಲ ಗುಣಗಳು ಇಷ್ಟ ಆಗದೇ ಈ ಹಿಂದೆಯೂ ಅನೇಕರು ದೂರವಾದರು. 18ನೇ ಬರ್ತ್‌ಡೇಗೆ ಗಿಫ್ಟ್ ಕೊಟ್ಟು ಪ್ರೊಪೋಸ್ ಮಾಡಿದ ಪಾಪ್ ತಾರೆ ಆ್ಯಡಂ ಲೆವಿನ್, ಅಮೆರಿಕದ ಟೆಲಿವಿಷನ್ ಪ್ರೊಡ್ಯೂಸರ್ ಚಾರ್ಲಿ ಎಬೆರ್ಸಾಲ್, ಸ್ಲೋವೇನಿಯನ್ ಬಾಸ್ಕೇಟ್ ಬಾಲ್ ಆಟಗಾರ ಸಾಶಾ ವುಜಿಕಿಕ್ ಜೊತೆಗೆ ಎರಡೆರಡು ವರುಷ ಓಡಾಡಿ ಕೈಕೊಟ್ಟಳು. ಇವೆಲ್ಲ ಸಂಬಂಧಗಳಲ್ಲೂ ಮರಿಯಾ ಎಂಗೇಜ್‌ಮೆಂಟ್‌ತನಕವಷ್ಟೇ ಹೋಗಿದ್ದಾಳೆ. ಮದ್ವೆ ಹತ್ತಿರ ಬಂದಾಗ ಕೈಕೊಟ್ಟು ನಡೆಯುತ್ತಾಳೆ.

ಈಗ ಟೆನಿಸ್‌ನ ಯುವ ಪುರುಷರಾರೂ ಮರಿಯಾ ಮೇಲೆ ಕಣ್ಣು ಹಾಕುತ್ತಿಲ್ವಂತೆ. ವಿಂಬಲ್ಡನ್ ಟೂರ್ನಿಯಲ್ಲಿ ಇಂಜ್ಯೂರಿ ಆಗಿ ಕೂತಿರುವ ಮರಿಯಾ ಈಗ ಸಂಗಾತಿಯಿಲ್ಲವೆಂಬ ಖಿನ್ನತೆಯಲ್ಲಿದ್ದಾಳಂತೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com