ಏಷ್ಯನ್ ರೋಯಿಂಗ್‌ನಲ್ಲಿ ಭಾರತಕ್ಕೆ ಏಳು ಪದಕ

ಸೋಮವಾರಷ್ಟೇ ಮುಕ್ತಾಯ ಕಂಡ 16ನೇ ಏಷ್ಯನ್ ರೋಯಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಭಾರತ 5 ರಜತ ಮತ್ತು 2 ಕಂಚು...
ಏಷ್ಯನ್ ರೋಯಿಂಗ್‌ನಲ್ಲಿ ಭಾರತಕ್ಕೆ ಏಳು ಪದಕ

ನವದೆಹಲಿ: ಸೋಮವಾರಷ್ಟೇ ಮುಕ್ತಾಯ ಕಂಡ 16ನೇ ಏಷ್ಯನ್ ರೋಯಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಭಾರತ 5 ರಜತ ಮತ್ತು 2 ಕಂಚು ಸೇರಿದಂತೆ ಒಟ್ಟು 7 ಪದಕಗಳನ್ನು ಜಯಿಸಿದೆ.

ಚೀನಾದ ಬೀಜಿಂಗ್‌ನಲ್ಲಿ ನಡೆದ ಸ್ಪರ್ಧಾವಳಿಯಲ್ಲಿ ಕಪಿಲ್ ಶರ್ಮಾ, ಜಸ್ವೀಂದರ್ ಸಿಂಗ್, ರಾಜೇಶ್ ವರ್ಮಾ ಮತ್ತು ಮೊಹಮದ್ ಆಜಾದ್ ಅವರಿದ್ದ ಪುರುಷರ ತಂಡ 6:03.25ಸೆ.ಗಳಲ್ಲಿ ಗುರಿಮುಟ್ಟಿ ರಜತ ಪದಕ ಪಡೆದರೆ, ದತ್ತು ಬಾಬನ್ ಭೋಕನಲ್ ಪುರುಷರ ಸಿಂಗಲ್ಸ್ ಸ್ಕಲ್ಸ್ ವಿಭಾಗದಲ್ಲಿ 7:18.14 ಸೆ.ಗಳ ಸಾಧನೆಯೊಂದಿಗೆ ಬೆಳ್ಳಿ ಪದಕ ಪಡೆದರು. ಇನ್ನು ವಿಕ್ರಮ್ ಸಿಂಗ್ ಮತ್ತು ಶೋಕೇಂದರ್ ತೋಮರ್(ಪುರುಷರ ಲೈಟ್‌ವೇಟ್ ಸ್ಕಲ್ಸ್ ವಿಭಾಗ) ಮತ್ತು ರೂಪೇಂದ್ರ ಸಿಂಗ್ ಮತ್ತು ಸೋನು ಲಕ್ಷ್ಮೀ ನರೇನ್ ಪುರುಷರ ಡಬಲ್ಸ್ ಸ್ಕಲ್ಸ್ ವಿಭಾಗದಲ್ಲಿ ಬೆಳ್ಳಿ ಪಡೆದರು.

ಇತ್ತ, ದೇವೀಂದರ್ ಸಿಂಗ್, ನವೀನ್ ಕುಮಾರ್ ಪುರುಷರ ಜೋಡಿ ವಿಭಾಗದಲ್ಲಿ ಕಂಚು ಗೆದ್ದರೆ, ಲೈಟ್‌ವೇಟ್ ಸಿಂಗಲ್ಸ್ ಸ್ಕಲ್ಸ್‌ನಲ್ಲಿ ದುಶ್ಯಂತ್ 3ನೇ ಸ್ಥಾನ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com