

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವ ವಹಿಸಿರುವ ಜಹೀರ್ ಖಾನ್ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟ ತಂದುಕೊಟ್ಟ ಗೌತಮ್ ಗಂಭೀರ್ ವಿರುದ್ಧ ಸೆಣಸಲಿದ್ದಾರೆ. ಡೆಲ್ಲಿಗೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವಿದೆ.
ಭಾರತೀಯ ಕಾಲಮಾನ ಪ್ರಕಾರ ಪಂದ್ಯ ರಾತ್ರಿ 8 ಗಂಟೆಗೆ ಶುರುವಾಗಲಿದೆ.
ಕೋಲ್ಕತ ನೈಟ್ ರೈಡರ್ಸ್ ಸಂಭಾವ್ಯ ತಂಡ
ಗೌತಮ್ ಗಂಭೀರ್ (ನಾಯಕ), ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಮನೀಷ್ ಪಾಂಡೆ, ಶಕೀಬ್ ಅಲ್ ಹಸನ್, ಯೂಸುಫ್ ಪಠಾಣ್, ಸೂರ್ಯಕುಮಾರ್ ಯಾದವ್, ಆಂಡ್ರೆ ರಸೆಲ್, ಬ್ರಾಡ್ ಹಾಗ್, ಪೀಯುಷ್ ಚಾವ್ಲಾ/ ಕುಲ್‌ದೀಪ್ ಯಾದವ್, ಉಮೇಶ್ ಯಾದವ್, ಮಾರ್ನ್ ಮಾರ್ಕೆಲ್/ಜಾನ್ ಹೇಸ್ಟಿಂಗ್ಸ್.
ಡೆಲ್ಲಿ ಡೇರ್‌ಡೆವಿಲ್ಸ್ ಸಂಭಾವ್ಯ ತಂಡ
ಶ್ರೇಯಸ್ ಅಯ್ಯರ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್/ಮಯಾಂಕ್ ಅಗರ್ವಾಲ್, ಡುಮಿನಿ, ಕರುಣ್ ನಾಯರ್, ಕಾರ್ಲೋಸ್ ಬ್ರಾಥ್‌ವೇಟ್, ಪವನ್ ನೇಗಿ, ಕ್ರಿಸ್ ಮೋರಿಸ್, ಜಹೀರ್ ಖಾನ್(ನಾಯಕ), ಅಮಿತ್ ಮಿಶ್ರಾ, ತಾಹಿರ್.