ರಿಯೋ ಒಲಿಂಪಿಕ್ಸ್ ಗೆ ಅದ್ಧೂರಿ ಚಾಲನೆ

ಬ್ರೆಜಿಲ್ ನಲ್ಲಿ ರಿಯೋ ಒಲಿಂಪಿಕ್ಸ್ ವರ್ಣರಂಜಿತವಾಗಿ ಆರಂಭಗೊಂಡಿದೆ...
ರಿಯೋ ಒಲಿಂಪಿಕ್ಸ್
ರಿಯೋ ಒಲಿಂಪಿಕ್ಸ್
Updated on: 

ರಿಯೋ ಡಿ ಜನೈರೋ: ಬ್ರೆಜಿಲ್ ನಲ್ಲಿ ರಿಯೋ ಒಲಿಂಪಿಕ್ಸ್ ವರ್ಣರಂಜಿತವಾಗಿ ಆರಂಭಗೊಂಡಿದೆ.

ಸಾಂಬಾ ನಾಡಲ್ಲಿ 31ನೇ ಆವೃತ್ತಿಯ ಒಲಿಂಪಿಕ್ಸ್ ಗೆ ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 4.20 ಸುಮಾರಿಗೆ ಒಲಿಂಪಿಕ್ಸ್ ಜ್ಯೋತಿ ಬೆಳಗುವುದರ ಮೂಲಕ ಅದ್ದೂರಿ ಚಾಲನೆ ಸಿಕ್ಕಿತು. ಸಾಂಬಾ ನೃತ್ಯದ ಸೊಬಗು, ಕ್ಯಾರಿಓಕ ಗಾನಸುಧೆಯೊಂದಿಗೆ ಸಾವಿರಾರು ಕಲಾವಿದರು ಮರಕಾನ ಕ್ರೀಡಾಂಗಣದಲ್ಲಿ ಮಂತ್ರಮುಗ್ಧ ಕ್ಷಣಗಳನ್ನು ದಾಖಲಿಸಿದರು.

ಅಮೆಜಾನ್ ಮಳೆಕಾಡುಗಳು ಬ್ರೆಜಿಲ್ ಜನತೆಯ ಜೀವನ ಶೈಲಿಯ ಭಾಗವಾಗಿರುವ ಬಗ್ಗೆ ಅದ್ಭುತ ರೂಪಕವನ್ನು ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. 3 ಗಂಟೆ ನಡೆದ ಸಮಾರಂಭದಲ್ಲಿ ಬ್ರೆಜಿಲ್ ನ 12 ಸಾಂಬಾ ಶಾಲೆಗಳ ಮಕ್ಕಳು ಸುಮಾರು 5,500 ಬಗೆಯ ವೇಷಭೂಷಣಗಳೊಂದಿಗೆ ಹೊಸ ಮಾಯಲೋಕವನ್ನೇ ಸೃಷ್ಠಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com