ಮೆಕ್ಕಾದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮದುವೆ..!

ಟೀಂ ಇಂಡಿಯಾದ ಮತ್ತೋರ್ವ ಕ್ರಿಕೆಟಿಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ದುಬೈ ಮೂಲಕ ಸಫಾ ಬೇಗ್ ಎಂಬುವವರನ್ನು ಮದುವೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ...
ಕ್ರಿಕೆಟಿಗ ಇರ್ಫಾನ್ ಮತ್ತು ಸಫಾ ಬೇಗ್
ಕ್ರಿಕೆಟಿಗ ಇರ್ಫಾನ್ ಮತ್ತು ಸಫಾ ಬೇಗ್

ವಡೋದರಾ: ಟೀಂ ಇಂಡಿಯಾದ ಮತ್ತೋರ್ವ ಕ್ರಿಕೆಟಿಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ದುಬೈ ಮೂಲಕ ಸಫಾ ಬೇಗ್ ಎಂಬುವವರನ್ನು ಮದುವೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇರ್ಫಾನ್ ಪಠಾಣ್ 2 ವರ್ಷದಿಂದ ಸೌದಿ ಅರೇಬಿಯಾ ಮೂಲದ ಜೆಡ್ಡಾ ಮೂಲದ ಸಫಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು, ಕಳೆದ ಗುರುವಾರ ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಮೆಕ್ಕಾದಲ್ಲಿ  ವಿವಾಹವಾಗಿದ್ದಾರೆ ತಿಳಿದುಬಂದಿದೆ.

21 ವರ್ಷದ ಸಫಾ ಬೇಗ್ ವೃತ್ತಿಪರವಾಗಿ ರೂಪದರ್ಶಿಯಾಗಿದ್ದು, ಈಗ್ಗೇ 2 ವರ್ಷಗಳ ಹಿಂದೆ ದುಬೈನಲ್ಲಿ ಸಫಾ ಮತ್ತು ಇರ್ಫಾನ್ ಪಠಾಣ್ ಭೇಟಿಯಾಗಿದ್ದರು. ಭೇಟಿ ಪರಿಚಯವಾಗಿ ಮಾರ್ಪಟ್ಟು  ಬಳಿಕ ಪರಸ್ಪರ ಪ್ರೀತಿಗೆ ತಿರುಗಿತ್ತು. ಉಭಯ ಕುಟುಂಬಗಳ ಒಪ್ಪಿಗೆಯ ಮೇರೆಗೆ 3 ತಿಂಗಳ ಹಿಂದೆ ಈ ಜೋಡಿಯ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ಅಂದೇ ವಿವಾಹದ ದಿನಾಂಕ  ಕೂಡ ನಿಶ್ಚಯವಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪಠಾಣ್ ಕುಟುಂಬ ಮತ್ತು ಸಫಾ ಬೇಗ್ ಅವರ ಕೆಲವೇ ಆಪ್ತರಿಗೆಷ್ಟೇ ವಿವಾಹಕ್ಕೆ ಆಮಂತ್ರಣ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಮುಂಬರುವ ಮಾರ್ಚ್ ತಿಂಗಳಲ್ಲಿ ಮುಂಬೈನಲ್ಲಿ ಆರತಕ್ಷತೆ  ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com