

ನವದೆಹಲಿ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ನಡುವಿನ ಸ್ನೇಹ ಸಂಬಂಧ ಅಂತ್ಯವಾದ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಇದೀಗ ಮತ್ತೆ ವಿರಾಟ್ ಕೊಹ್ಲಿ ಸುದ್ದಿಯಾಗಿದ್ದಾರೆ.
ಖ್ಯಾತ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ತಮ್ಮ ಸೆಲ್ಫಿಯೊಂದನ್ನು ಅಪ್ ಲೋಡ್ ಮಾಡಿ ಹಾರ್ಟ್ ಬ್ರೊಕೆನ್ ಎಂಬ ಶೀರ್ಷಿಕೆ ಹಾಕಿದ್ದರು. ಇದಕ್ಕೆ ವ್ಯಾಪಕ ಕಮೆಂಟ್ ಗಳು ಬಂದ ಹಿನ್ನಲೆಯಲ್ಲಿ ಕೂಡಲೇ ಅದನ್ನು ಕೊಹ್ಲಿ ತೆಗೆದು ಹಾಕಿದ್ದರು. ಬಳಿಕ ಮತ್ತೆ ಅದೇ ಫೊಟೋವನ್ನು ಹಾಕಿ, ಈ ಚಿತ್ರವನ್ನು ಡಿಲೀಟ್ ಮಾಡುವ ಮೂಲಕ ತಪ್ಪು ಮಾಡಿದೆ ಎಂದೆನಿಸುತ್ತಿದೆ. ಹೀಗಾಗಿ ಮತ್ತೆ ಈ ಚಿತ್ರವನ್ನು ಅಪ್ ಲೋಡ್ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇದೀಗ ವಿರಾಟ್ ಕೊಹ್ಲಿ ಅವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಿರಾಟ್-ಅನುಷ್ಕಾ ನಡುವಿನ ಸ್ನೇಹಸಂಬಂಧ ಮುರಿದು ಬಿದ್ದ ಕುರಿತು ಯಾರೂ ಯಾವುದೇ ರೀತಿಯ ಹೇಳಿಕೆ ನೀಡದಿದ್ದರೂ, ಕೊಹ್ಲಿ ಅವರ ಈ ನಡೆ ಅದು ಸತ್ಯವೆಂದು ಹೇಳಲೆತ್ನಿಸುತ್ತಿರುವ ಪ್ರಯತ್ನವೆಂಬಂತೆ ಕಾಣುತ್ತಿದೆ.