

ನವದೆಹಲಿ: ಕ್ರಿಕೆಟ್ ಆಡಿದರೆ ಅಷ್ಟೇ ಅಲ್ಲ ವೀಕ್ಷಕ ವಿವರಣೆ ನೀಡಿದರೂ ಭಾರಿ ಮೊತ್ತದ ಸಂಭಾವನೆ ದೊರೆಯುತ್ತದೆ ಎಂಬುದಕ್ಕೆ ಇತ್ತೀಚೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ್ದ ಆಯವ್ಯಯಪಟ್ಟಿ ಸಾಕ್ಷಿಯಾಗಿದೆ.
ಏಕೆಂದರೆ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಪಾಲ್ಗೊಂಡಿದ್ದ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಹಾಗೂ ಸಂಜಯ್ ಮಂಜ್ರೇಕರ್ ಅವರಿಗೆ ಭಾರಿ ಮೊತ್ತದ ಸಂಭಾವನೆ ನೀಡಿದೆ.
ಬಿಸಿಸಿಐ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ವೀಕ್ಷಕ ವಿವರಣೆ ನೀಡಿದ್ದ ಸಂಜಯ್ ಮಂಜ್ರೇಕರ್ ಅವರಿಗೆ 36,49,375 ರು. ಸಂಭಾವನೆ ನೀಡಿದ್ದರೆ, ನಾಲ್ಕು ಏಕದಿನ ಪಂದ್ಯ ಹಾಗೂ 4 ಟೆಸ್ಟ್ ಪಂದ್ಯಗಳಲ್ಲಿ ಕಾಮೆಂಟರಿ ಮಾಡಿದ್ದ ಅನಿಲ್ ಕುಂಬ್ಳೆ ಅವರಿಗೆ 39,10,500 ರು.ಗಳನ್ನು ಸಂಭಾವನೆಯಾಗಿ ನೀಡಿದೆ.