

ರಾಂಚಿ: ಸತತ ಗೆಲುವು ಸಾಧಿಸುತ್ತಿರುವ ಭಾರತ ವನಿತೆಯರ ತಂಡ ಪ್ರವಾಸಿ ಶ್ರೀಲಂಕಾ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ.
ರಾಂಚಿಯಲ್ಲಿ ನಡೆದ ಟಿ20 ಸರಣಿಯ 3ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 89 ರನ್ಗಳ ಸಾಧಾರಣ ಮೊತ್ತವನ್ನು ಪೇರಿಸಿತು. 90 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಭಾರತ 9 ವಿಕೆಟ್ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು.
ಭಾರತದ ಪರ ವಿ.ಆರ್ ವನಿತಾ 34, ಎಸ್ ಮಂದನಾ ಅಜೇಯ 43, ವಿ ಕೃಷ್ಣಮೂರ್ತಿ 13* ರನ್ ಗಳಿಸಿದರು.
ಶ್ರೀಲಂಕಾ ಪರ ಎ.ಸಿ. ಜಯಾನ್ಗನಿ 21, ಎಲ್ಇ ಕೌಸಲ್ಯ 25 ಅಜೇಯ ರನ್ಗಳ ಗರಿಷ್ಠ ಕೊಡುಗೆ ನೀಡಿದರು.
ಭಾರತ ಪರ ಇ ಬಿಶ್ತ್ 3, ಎ ಎ ಪಾಟಿಲ್ 2, ಪೂನಂ ಯಾದವ್ 1 ಹಾಗೂ ಆರ್ ಎಸ್ ಗಾಯಕ್ವಾಡ್ 1 ವಿಕೆಟ್ ಗಳಿಸಿದರು.