ಕೊಹ್ಲಿ-ಛೆಟ್ರಿ ಶುಭಕಾಮನೆ

ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಪರಸ್ಪರ ಶುಭಕಾಮನೆಗಳನ್ನು ಹಂಚಿಕೊಂಡಿದ್ದಾರೆ...
ಸುನೀಲ್ ಚೆಟ್ರಿ, ವಿರಾಟ್ ಕೊಹ್ಲಿ
ಸುನೀಲ್ ಚೆಟ್ರಿ, ವಿರಾಟ್ ಕೊಹ್ಲಿ

ನವದೆಹಲಿ: ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಪರಸ್ಪರ ಶುಭಕಾಮನೆಗಳನ್ನು ಹಂಚಿಕೊಂಡಿದ್ದಾರೆ.

ಭಾನುವಾರ ಭಾರತ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್‍ಶಿಪ್‍ನಲ್ಲಿ ಗೆದ್ದ ನಂತರ ವಿರಾಟ್ ಕೊಹ್ಲಿ 'ಸ್ಯಾಫ್ ಚಾಂಪಿಯನ್‍ಶಿಪ್ ಅನ್ನು 7ನೇ ಬಾರಿ ಗೆದ್ದಿದ್ದಕ್ಕೆ ಶುಭಾಶಯಗಳು. ಹೆಚ್ಚುವರಿ ಸಮಯದಲ್ಲಿ ನಾಯಕನ ಗೋಲು ಅಮೋಘವಾಗಿತ್ತು'' ಎಂದು ಟ್ವೀಟ್ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಛೆಟ್ರಿ 'ನಾಯಕನಿಗೆ ಧನ್ಯವಾದ.

ಆಸ್ಟ್ರೇಲಿಯಾದಲ್ಲಿ ನಮ್ಮ ಹುಡುಗರಿಗೆ ಜಯಿಸಲು ಹೆಚ್ಚುವರಿ ಸಮಯ ಅಗತ್ಯವಿಲ್ಲ. ಶುಭವಾಗಲಿ'' ಎಂದು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಟ್ವಿಟರ್‍ನಲ್ಲಿ ಶುಭ ಕೋರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com