ನಾಯಕತ್ವಕ್ಕೆ ಬೈ ಹೇಳಿದ ಹಾಶೀಂ ಆಮ್ಲಾ

ದಿಢೀರ್ ಬೆಳವಣಿಗೆಯಲ್ಲಿ ದ. ಆಫ್ರಿಕಾ ಟೆಸ್ಟ್ ತಂಡದ ನಾಯಕ ಹಾಶೀಂ ಆಮ್ಲಾ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಬುಧವಾರ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯ ಡ್ರಾ ಕಂಡ...
ಹಾಶೀಂ ಆಮ್ಲಾ
ಹಾಶೀಂ ಆಮ್ಲಾ
Updated on

ಕೇಪ್‍ಟೌನ್: ದಿಢೀರ್ ಬೆಳವಣಿಗೆಯಲ್ಲಿ ದ. ಆಫ್ರಿಕಾ ಟೆಸ್ಟ್ ತಂಡದ ನಾಯಕ ಹಾಶೀಂ ಆಮ್ಲಾ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಬುಧವಾರ ಇಂಗ್ಲೆಂಡ್ ವಿರುದ್ಧದ  2ನೇ ಪಂದ್ಯ ಡ್ರಾ ಕಂಡ ಬಳಿಕ ಆಮ್ಲಾ ಸ್ವತಃ ಈ ನಿರ್ಧಾರ ಪ್ರಕಟಿಸಿದರು. ಕಳೆದ ವರ್ಷ ಸಾಕಷ್ಟು ನಿರಾಸೆ ಅನುಭವಿಸಿದ್ದ ಆಮ್ಲಾ ನೇತೃತ್ವದ ದ.ಆಫ್ರಿಕಾ, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸೋತಿತ್ತಾದರೂ, 2ನೇ ಟೆಸ್ಟ್‍ನಲ್ಲಿ 32 ವರ್ಷದ ಆಮ್ಲಾ ದ್ವಿಶತಕ ದಾಖಲಿಸಿ ತಂಡಕ್ಕೆ ಆಸರೆಯಾಗಿದ್ದರು. ಸಾಕಷ್ಟು ಯೋಚಿಸಿ, ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಆಮ್ಲಾ  ತಿಳಿಸಿದರು. ಟೆಸ್ಟ್ ತಂಡದ ಸಾರಥ್ಯವನ್ನು ಸದ್ಯಕ್ಕೆ ಎಬಿ ಡಿವಿಲಿಯರ್ಸ್‍ಗೆ ವಹಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com