ನ್ಯೂಜಿಲೆಂಡ್‍ಗೆ ಭರ್ಜರಿ ಜಯ

ಭಾನುವಾರ ಸೆಡ್ಡಾನ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 10 ವಿಕೆಟ್ ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿತು. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 11ರ ಸಮಬಲ ಸಾಧಿಸಿತು...
ಕಿವೀಸ್ ಜಯಕ್ಕೆ ಕಾರಣರಾದ ಗಪ್ಟಿಲ್ ಮತ್ತು ವಿಲಿಯಮ್ಸನ್
ಕಿವೀಸ್ ಜಯಕ್ಕೆ ಕಾರಣರಾದ ಗಪ್ಟಿಲ್ ಮತ್ತು ವಿಲಿಯಮ್ಸನ್
Updated on: 

ಹ್ಯಾಮಿಲ್ಟನ್: ಭಾನುವಾರ ಇಲ್ಲಿನ ಸೆಡ್ಡಾನ್ ಪಾಕ್ರ್ ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 10 ವಿಕೆಟ್ ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿತು. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ  ಉಭಯ ತಂಡಗಳು 11ರ ಸಮಬಲ ಸಾಧಿಸಿತು.

ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆ ನಂತರ 20 ಓವರ್‍ಗಳಲ್ಲಿ 7 ವಿಕೆಟ್‍ಗೆ 168 ರನ್ ದಾಖಲಿಸಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ  17.4 ಓವರ್‍ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 171 ರನ್ ದಾಖಲಿಸಿತು.

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 20 ಓವರ್‍ಗಳಲ್ಲಿ 7 ವಿಕೆಟ್‍ಗೆ 168 (ಅಕ್ಮಲ್ ಅಜೇಯ 56, ಮಲಿಕ್ 39, ಮೆಕ್ಲೆನಾಘನ್  23ಕ್ಕೆ 2) ನ್ಯೂಜಿಲೆಂಡ್ 17.4 ಓವರ್‍ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 171  (ಗುಪ್ಟಿಲ್ ಅಜೇಯ 87, ಕೇನ್ ಅಜೇಯ 72)

ಪಂದ್ಯಶ್ರೇಷ್ಠ: ಮಾರ್ಟೀನ್ ಗುಪ್ಟಿಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com